26 ಕೆ.ಜಿ. ಗೋ ಮಾಂಸ ವಶ

8sirsi3
Published on

ಶಿರಸಿ: ಇಲ್ಲಿನ ನೆಹರು ನಗರದಲ್ಲಿ ಗೋವು ಕಡಿದು ಮಾಂಸ ಮಾರಾಟ ಮಾಡಲು ಸಾಗಿಸುತ್ತಿದ್ದವರ ಮೇಲೆ ದಾಳಿನಡೆಸಿದ ಪೊಲೀಸರು 26 ಕೆ.ಜಿ. ಮಾಂಸ ವಶಕ್ಕೆ ಪಡೆದಿದ್ದಾರೆ. ಭಾನುವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾರುಕಟ್ಟೆ ಠಾಣೆ ಪೊಲೀಸರು 6,560 ರೂ. ಮೌಲ್ಯದ 26 ಕೆ.ಜಿ. ಗೋಮಾಂಸ, ಕೃತ್ಯಕ್ಕೆ ಬಳಸಿದ ಅಂದಾಜು 50 ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಮಾರುಕಟ್ಟೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net