

ಹುಬ್ಬಳ್ಳಿ: ಹುಬ್ಬಳ್ಳಿ ಕಾರ್ಮಿಕ ಭವನದಲ್ಲಿ ಲ್ಯಾಪ್‌ಟಾಪ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 26 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ತಂದಿಟ್ಟಿದ್ದ 83 ಲ್ಯಾಪ್‌ಟಾಪ್‌ಗಳನ್ನು ಆರೋಪಿಗಳು ಕಳವು ಮಾಡಿದ್ದರು. ಸೆ. 6ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಲ್ಯಾಪ್‌ಟಾಪ್ ಕಳ್ಳತನದ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ದೀಪಕ ನಾಯಕ್, ಕೃಷ್ಣ ಕಬ್ಬೇರ, ಸುಭಾಷ ಕುರಡಿಕೇರಿ, ಶ್ರೀನಿವಾಸ ಕವಡೇನವರ, ಸಾಯಿನಾಥ ಕೊರವರ, ನಾಗರಾಜ ಅಂಬಿಗೇರ, ಪ್ರಕಾಶ ನಿಟ್ಟೂರ, ರುತಿಕ ಕ್ಯಾರಕಟ್ಟಿ, ಫೈರೋಜ ಕೊಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಗನ್ ಕಠಾರೆ, ಅರ್ಜುನ ವಾಲೀಕಾರ, ದಾದಾಪೀರ ಮುಜಾಹಿದ್, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ, ಅಭಿ ಚಲವಾದಿ, ಮಹಾಂತೇಶ ಇಜಾರದ, ಸುನೀಲ ಹುಬ್ಬಳ್ಳಿ, ಪ್ರಜ್ವಲ್ ಬಾಗಲಕೋಟ, ಹರೀಶ ಸಗಡಿ, ರಂಜಾನ್ ಹಂಪಿಹೊಳಿ, ಮಂಜುನಾಥ ಕ್ಯಾರಕಟ್ಟಿ, ನಾಗರಾಜ ಸರ್ವಿ, ದರ್ಶನ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಅವರನ್ನು ಬಂಧಿಸಲಾಗಿದೆ ಎಂದರು.
45 ಲಕ್ಷ ರೂ. ಮೌಲ್ಯದ 83 ಲ್ಯಾಪ್‌ಟಾಪ್‌ಗಳು, ಕೃತ್ಯಕ್ಕೆ ಬಳಸಿದ 1 ಕಾರ್, 2 ಆಟೋ, 2 ಬೈಕ್ ಸೇರಿ ಒಟ್ಟು 60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ಸುರೇಶ ಯಳ್ಳೂರ, ಸಿಬ್ಬಂದಿ ಪಿ.ಬಿ. ಕಾಳೆ, ನಾಗರಾಜ ಕೆಂಚಣ್ಣವರ, ಕೃಷ್ಣ ಮೋಟೆಬೆನ್ನೂರ, ಅಭಯ ಕಾಟ್ನಳ್ಳಿ, ರೆಮಶ ಹಳ್ಳೆ, ಸಂತೋಷ ವಲ್ಯಾಪುರ ಇತರರ ಕಾರ್ಯಕ್ಕೆ ಶ್ಲಾಘಿಸಿದರು.