ಕಳೂರು ರಾಮೇಶ್ವರ ಸೊಸೈಟಿಗೆ 26 ಲಕ್ಷ ರೂ. ಲಾಭ

21hos1p kaluru society
ಹೊಸನಗರದ ಕಳೂರು ಶ್ರೀ ರಾಮೇಶ್ವರ ಸೊಸೈಟಿಯ ಸರ್ವ ಸದಸ್ಯರ ಸಭೆ ಉದ್ದೇಶಿಸಿ ದುಮ್ಮ ವಿನಯ್ ಕುಮಾರ್ ಮಾತನಾಡಿದರು. ಚಂದ್ರಶೇಖರ, ವೀರೇಂದ್ರ, ಹೂವಪ್ಪ, ಗುಬ್ಬಿಗಾ ರವಿ ಇತರರಿದ್ದರು.
Published on

ಹೊಸನಗರ: ಕಳೂರು ಶ್ರೀ ರಾಮೇಶ್ವರ ಸೊಸೈಟಿಯು 26 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 40 ಗ್ರಾಮಗಳ ವ್ಯಾಪ್ತಿಯಲ್ಲಿರುವ ಸಂಘದಲ್ಲಿ 2,723 ಸದಸ್ಯರಿದ್ದಾರೆ. 885 ಸದಸ್ಯರಿಗೆ ಒಟ್ಟು 7.16 ಕೋಟಿ ರೂ. ಸಾಲ ವಿತರಿಸಲಾಗಿದೆ. 51 ಹೊಸ ಸದಸ್ಯರಿಗೆ 71 ಲಕ್ಷ ರೂ. ಸಾಲ ನೀಡಲಾಗಿದೆ ಎಂದರು. ಗೊಬ್ಬರ ಹಾಗೂ ಕೀಟನಾಶಕ ಮಾರಾಟದಿಂದ 8.42 ಕೋಟಿ ರೂ. ವಹಿವಾಟು ಮಾಡಲಾಗಿದ್ದು, 32 ಲಕ್ಷ ರೂ. ಲಾಭ ಗಳಿಸಿದೆ. ಹಳೆ ಕಟ್ಟಡವನ್ನು ಸಂಪೂರ್ಣ ತೆರವು ಮಾಡಿದ್ದು, ಸೆ.24ರಂದು ಶಾಸಕರಿಂದ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಪಾಧ್ಯಕ್ಷ ಚಂದ್ರಶೇಖರ, ಸಿಇಒ ವೀರೇಂದ್ರ, ಹೂವಪ್ಪ, ಗುಬ್ಬಿಗಾ ರವಿ, ಗಂಗಾಧರ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net