ಜ.22ರಂದು ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ: ಶ್ರೀರಾಮ ಭಜನ ಸಭಾದ ಅಧ್ಯಕ್ಷ ಬಿ.ಟಿ.ಜಯರಾಮು ಮಾಹಿತಿ

26 feet tall Abhaya Hasta Anjaneya Swami New idol Lokarpana mandya
Published on

ಮಂಡ್ಯ: ಶ್ರೀರಾಮ ಭಜನ ಸಭಾದಿಂದ ಇಲ್ಲಿನ ನೆಹರು ನಗರದಲ್ಲಿ ಜ.22ರಂದು ಬೆಳಗ್ಗೆ 11ಗಂಟೆಗೆ 26 ಅಡಿ ಎತ್ತರ ಅಭಯ ಹಸ್ತ ಆಂಜನೇಯಸ್ವಾಮಿ ನೂತನ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಭಾದ ಅಧ್ಯಕ್ಷ ಬಿ.ಟಿ.ಜಯರಾಮು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯ ಸವಿನೆನಪಿಗಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪಿಸಲಾಗುತ್ತಿದೆ. ಸೀತೆ, ಕೋದಂಡರಾಮ, ಬಲಮುರಿ ಗಣಪತಿ, ನವಗ್ರಹ ದೇವತೆ, ಬನಶಂಕರಿದೇವಿ, ರಾಮೇಶ್ವರ ಜೀರ್ಣೋದ್ಧಾರ ಪ್ರತಿಷ್ಠಾ ಕುಂಭಾಭಿಷೇಕ ಸಮೇತ ಅಭಯ ಆಂಜನೇಯಸ್ವಾಮಿ ನೂತನ ವಿಗ್ರಹ ಲೋಕಾರ್ಪಣೆಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಚಿನ್ಮಯ ಮಿಷನ್ ಸ್ವಾಮೀ ಆದಿತ್ಯಾನಂದ ಸರಸ್ವತಿ ಆಶೀರ್ವಚನ ನೀಡಿದ್ದಾರೆ. ಶಾಸಕ ರವಿಕುಮಾರ್ ಗಣಿಗ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಭಾಗವಹಿಸಲಿದ್ದಾರೆ. ಇದೇ ವೇಳೆ ಡಾ.ಪ್ರಭಾವತಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸಭಾದ ಡಾ.ಸಿದ್ದರಾಮು, ಬಿ.ಎಚ್.ಚನ್ನೇಗೌಡ, ಜಯರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net