

ವಿಜಯಪುರ : ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಎಸ್.ಬಿ. ತಿಮಸಾನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಶಾಲೆಗೆ ಶೇ. 91 ರಷ್ಟು ಫಲಿತಾಂಶ ಲಭಿಸಿದೆ. ಪರೀೆ ಹಾಜರಾದ 66 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ವಿದ್ಯಾರ್ಥಿನಿ ನಂದಿನಿ ಪೂಜಾರಿ 619 ಅಂಕ ಪಡೆದು ಪ್ರಥಮ, ಲಕ್ಷಿ$್ಮ ಬೋಂದ್ರೆ ಹಾಗೂ ಸೃಜನ ಗೌಡರ ತಲಾ 616 ಅಂಕ ಪಡೆದು ದ್ವೀತಿಯ ಹಾಗೂ ತನು ಹಂಚಿನಾಳ 608 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಮುಖ್ಯಸ್ಥ ಸಂಗಮೇಶ ಕೊಣ್ಣೂರ, ಕಾರ್ಯದರ್ಶಿ ಸಂಗಮೇಶ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.