

ಕೋಟ: ಇಲ್ಲಿನ ಗುಡ್ಡೆ ಅಂಗಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಕೋಟ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ 26 ಮಂದಿಯನ್ನು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಯ ಗುಡ್ಡೆ ಅಂಗಡಿ ವಿನಾಯಕ ಸಭಾಭವನದಲ್ಲಿ ಇಸ್ಪೀಟ್ ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿ ಕೋಟ ಠಾಣಾಧಿಕಾರಿ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. 26 ಮಂದಿಯನ್ನು ಬಂಧಿಸಿ ಅವರಿಂದ 1,49,680 ಲಕ್ಷ ರೂ.ನಗದು, ಮೂರು ಕಾರು, ನಾಲ್ಕು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಅಬ್ದುಲ್ ಮುನೀರ್, ಕುಂದಾಪುರ ಸಲ್ಮಾನ್, ತೀರ್ಥಹಳ್ಳಿ ಬಸವರಾಜ, ವಿಷ್ಣು ಕೆ.ವಿ., ದಿನೇಶ್,ಕೆ. ವಿನಾಯಕ, ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ, ಇ. ಆ್ಯಂಟನಿ ಮಸ್ಕರೇನಸ್, ಶೃತಿರಾಜ್, ರಘು, ಹುಸೇನ್, ಸಂದೇಶ್, ರಾಜು ಮೊಗೇರ, ಗೋಪಾಲ, ಗಣೇಶ್, ಮಿಥುನ್, ಸುಧರ್ಮ, ಕಮಲಾಕ್ಷ, ಸುಧಾಕರ, ಇಸ್ಪೀಟ್ ಆಡಿಸುತ್ತಿದ್ದ ಉದಯ್ ಕುಮಾರ್ ಶೆಟ್ಟಿ ಮೊಳಹಳ್ಳಿ, ಕಟ್ಟಡದ ಮಾಲೀಕ ಸಂತೋಷ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈ 26 ಜನರ ಮೇಲೆ ಪ್ರಕರಣ ದಾಖಲಾಗಿದೆ.