ಯಶಸ್ವಿ ಸಂಘಕ್ಕೆ 26.66 ಲಕ್ಷ ರೂ.ನಿವ್ವಳ ಲಾಭ

26.66 lakhs net profit for successful association
ಬೀಳಗಿ ತಾಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಯಶಸ್ವಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಡಾ. ಆಶಾ.ಎಸ್.ಬೀಳಗಿ, ಉಪಾಧ್ಯಕ್ಷೆ ಸುಫಿಯಾಬೇಗಂ ಮುಜಾವರ, ನಿರ್ದೇಶಕ ಅಕ್ಬರ್ ಜುಮನಾಳ ಇದ್ದರು.
Published on

ಬೀಳಗಿ: ಯಶಸ್ವಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ, ಠೇವುದಾರರ ವಿಶ್ವಾಸ ಮತ್ತು ಆಡಳಿತ ಮಂಡಳಿ ಸಹಕಾರ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಅಭಿವದ್ಧಿಯುತ್ತ ದಾಪುಗಾಲು ಹಾಕಿ 26.66 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಯಶಸ್ವಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಡಾ. ಆಶಾ.ಎಸ್.ಬೀಳಗಿ ಹೇಳಿದರು.

ತಾಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡ ಯಶಸ್ವಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 17ನೇ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಘವು ಸ್ವಂತ ಬಂಡವಾಳದಿಂದ ಸದಸ್ಯರಿಗೆ ಸಾಲ ಸೌಲಭ್ಯ ನೀಡಿದೆ. ಮಹಿಳೆಯರು ಸ್ವಾಲಂಬಿಯಾಗಿ ಬದುಕು ಸಾಗಿಸಲು, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗಿದೆ. ನಮ್ಮ ಸಂಸ್ಥೆ ಎಲ್ಲರನ್ನು ಪ್ರೀತಿ, ವಿಶ್ವಾದಿಂದ ಕಾಣುತ್ತಿದ್ದು, ಪ್ರಧಾನ ಕಚೇರಿ ಹಾಗೂ 10 ಶಾಖೆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ ಎಂದರು.

ಯಶಸ್ವಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ರಾಜು ಬಿ. ಗರಿಬನ್ನವರ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕ ಮಾರುತಿ ಬರಗಾಲ ಹಾಗೂ ಸನ್ಮಾನಿತರ ಪರವಾಗಿ ಪತ್ರಕರ್ತ ಡಿ.ಎಂ. ಸಾವಕಾರ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳು ಉತ್ತಮ ಗ್ರಾಹಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಸುಫಿಯಾಬೇಗಂ ಮುಜಾವರ, ನಿರ್ದೇಶಕ ಅಕ್ಬರ್ ಜುಮನಾಳ, ಮಹಮ್ಮದ ರಫೀಕ ಸಾರವಾಡ, ಬಾಲಪ್ಪ ಮಾಸರಡ್ಡಿ, ಶರೀಪಾ ರಾಜಪಾಲೆ, ಬಾಷಾಸಾಬ ಚೌದರಿ, ಮಲ್ಲಪ್ಪ ತುಂಬರಮಟ್ಟಿ, ಉಮರಸಾಬ ಗಣಿ, ಫಿದಾಮಹಮ್ಮದ ಭಕ್ಷಿ, ಯಲ್ಲಪ್ಪ ಪಿಡೇಗೋಳ, ಹನಮಂತ ಮಾದರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net