

ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಯುಕ್ತ ಏ.26 ಮತ್ತು 27ರಂದು ರಾಷ್ಟ್ರಮಟ್ಟದ ಕಾನೂನು ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾಯೆರ್ ಜ್ಯೋತಿ ಹಿರೇಮಠ ತಿಳಿಸಿದರು.
ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯದ ಕೇಂದ್ರ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಕಾನೂನು ಉತ್ಸವದಲ್ಲಿ ಕಾನೂನು ರಸಪ್ರಶ್ನೆ ಮತ್ತು ಕದಾರರ ಸಂದರ್ಶನ ಸ್ಪರ್ಧೆ ನಡೆಯಲಿವೆ. ದೇಶಾದ್ಯಂತ 20ಕ್ಕೂ ಅಧಿಕ ತಂಡ ಪಾಲ್ಗೊಳ್ಳಲಿವೆ ಎಂದರು.
ಕದಾರರ ಸಂದರ್ಶನ ಸ್ಪರ್ಧೆಯಲ್ಲಿ ಇಬ್ಬರು ಕಾನೂನು ವಿದ್ಯಾರ್ಥಿಗಳು ವಕೀಲರಾಗಿ ಭಾಗವಹಿಸಿ ಕದಾರರ ಪಾತ್ರ ವಹಿಸುವ ವ್ಯಕ್ತಿಗಳೊಂದಿಗೆ ಸಂದರ್ಶನ ನಡೆಸುತ್ತಾರೆ. ಕದಾರರು ಇಲ್ಲದ ವೇಳೆ ಸಂದರ್ಶನ ವಿಶ್ಲೇಷಿಸಿ, ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸುತ್ತಾರೆ. 35 ನಿಮಿಷ ಈ ಪ್ರಕ್ರಿಯೆ ನಡೆಯುತ್ತದೆ. ಬಳಿಕ ನ್ಯಾಯಾಧೀಶರ ಮಂಡಳಿಯು ಕೇಳುವಿಕೆ, ಪ್ರಶ್ನಿಸುವಿಕೆ, ಯೋಜನೆ ಮತ್ತು ವಿಶ್ಲೇಷಣಾ ಕೌಶಲಗಳನ್ನು ಆಧರಿಸಿ ಮೌಲ್ಯಮಾಪನ ನಡೆಸುತ್ತದೆ ಎಂದು ವಿವರಿಸಿದರು.
ಏ.26ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯ ಎಸ್.ವಿ.ಕುಲಕರ್ಣಿ ಉತ್ಸವ ಉದ್ಘಾಟಿಸುವರು. ಕಾಲೇಜಿನ ಆಡಳಿತ ಮಂಡಳಿ ಅಧ್ಯ ಆರ್.ಬಿ.ಬೆಲ್ಲದ ಅಧ್ಯತೆ ವಹಿಸುವರು. ಏ.27ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಶ್ರೀಶಾನಂದ, ಕರ್ನಾಟಕ ಆಡಳಿತಾಧಿಕಾರಿ ಟ್ರಿಬ್ಯುನಲ್ ಅಧ್ಯ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ, ಸುಪ್ರೀಂಕೋರ್ಟ್ ವಕೀಲ ಎಂ.ಬಿ.ಝಿರಲಿ, ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ ಭಾಗವಹಿಸಲಿದ್ದಾರೆ ಎಂದರು.