

ಬೆಳಗಾವಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 1ನೆಯ ತ್ರೈಮಾಸಿಕ ನಿರ್ವಹಣೆ ಕೆಲಸಗಳ ಪ್ರಯುಕ್ತ ಉದ್ಯಮಬಾಗ 110 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಮೇ 25ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಖಾನಾಪುರ ರಸ್ತೆ, ಉದ್ಯಮಬಾಗ, ಕೈಗಾರಿಕಾ ಪ್ರದೇಶ, ಗುರುಪ್ರಸಾದ ಕಾಲನಿ, ರಾಣಿ ಚನ್ನಮ್ಮ ನಗರ, 3ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‌ಚಂದ್ರ ಕಾಲನಿ, ಉತ್ಸವ ಹೊಟೇಲ್, ಜಿಐಟಿ, ದೇವೆಂದ್ರ ನಗರ, ಮಹಾವೀರ ನಗರ, ಸಮೇದ ನಗರ, ಜ್ಞಾನ ಪ್ರಮೋದ ಶಾಲೆ ಹತ್ತಿರ, ಮಂಡೋಳಿ ರಸ್ತೆ, ಕಾವೇರಿ ಕಾಲನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲನಿ, ಸ್ವಾಮಿನಾಥ ಕಾಲನಿ, ನಿತ್ಯನಂದ ಕಾಲನಿ, ಡಿಫೆನ್ಸ್ ಕಾಲನಿ, ವಾಟವೆ ಕಾಲನಿ, ಜೈತನ ಮಾಳ ಹಾಗೂ ಸತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.