25ರಂದು ನಗರದಲ್ಲಿ ಬೈಕ್ ರ‌್ಯಾಲಿ

SRI KRISHNA
Published on

ಚಿತ್ರದುರ್ಗ: ನಗರದ ಕೃಷ್ಣಯಾದವಾನಂದ ಮಠದ ಸಮೀಪದ ಶ್ರೀ ಕೃಷ್ಣ ವೃತ್ತದಲ್ಲಿ ಆ.26ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಕುರಿತಂತೆ ಚಿತ್ರ ದುರ್ಗ ತಾಲೂಕು ಗೊಲ್ಲ ಸಮಾಜದಿಂದ ಈಚೆಗೆ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆಚರಣಾ ಸಮಿತಿ ಅಧ್ಯಕ್ಷ ಈರಜ್ಜನಹಟ್ಟಿ ಕೆ.ಕದುರಪ್ಪ ಅವರು ಮಾತನಾಡಿ,ಕಾರ‌್ಯಕ್ರಮದ ಅಂಗವಾಗಿ ಆ.25ರಂದು ನಗರದಲ್ಲಿ ಶ್ರೀಕೃಷ್ಣ ವೃತ್ತದಿಂದ ಬೈಕ್‌ರ‌್ಯಾಲಿ ನಡೆಯಲಿದೆ. 26ರಂದು ಬೆಳಗಿನಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳ ನಡೆಯಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ,ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ,ಆನಂದ್,ನಾಗರಾಜ್,ಟಿ.ಜಗ ದೀಶ್,ಗರಡಿತಿಮ್ಮಣ್ಣ,ಡಿ.ಸುರೇಶ್,ಸಂಪತ್‌ಕುಮಾರ್,ಗೌಡಪ್ಪ,ನಿಂಗೇಶ್,ಮಹಾಂತೇಶ್,ಅವಳೇಶ್,ಜಗ್ಗಣ್ಣ,ಗೋವಿಂದಪ್ಪ,ಜನಾರ್ಧ ನ್, ಮಹಾಲಿಂಗಪ್ಪ,ವಿರುಪಾಕ್ಷಪ್ಪ ಯಾದವ್,ಹರೀಶ್,ಮಂಜುನಾಥ,ಲೋಕೇಶ್,ಮಂಜುನಾಥ, ತಿಮ್ಮರಾಯಪ್ಪ, ಮೈಲಾರಪ್ಪ,ಸಂತೋ ಷ್‌ಕುಮಾರ್,ಕೃಷ್ಣ ವೃತ್ತ ಕಾರ್ಯಕಾರಿ ಸಮಿತಿ ಸದಸ್ಯರು,ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net