25ರಂದು ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ

CTD 22 G.S.SHANTAKUMAR--05
Published on

ಚಿತ್ರದುರ್ಗ: ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಘಟಕದ ಬಸ್ ಚಾಲಕ ಜಿ.ಎಸ್.ಶಾಂತಕುಮಾರ್ ಅವರು ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಪಘಾತ ರಹಿತ ಸೇವೆ ಸಲ್ಲಿಸುತ್ತಿರುವ ಶಾಂತಕುಮಾರ್,ಜಗಳೂರು ತಾಲೂಕಿನ ಗೌರಮ್ಮನಹಳ್ಳಿಯವರು.

ಪ್ರಶಸ್ತಿ ಪ್ರದಾನ ಸಮಾರಂಭ ದೊಡ್ಡಬಳ್ಳಾಪುರದ ಕೆ.ಎಂ.ಎಚ್.ಕಲ್ಯಾಣ ಮಂಟಪದಲ್ಲಿ ಜೂ.25ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ,ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್,ವಿಶ್ರಾಂತ ನ್ಯಾಯಮೂರ್ತಿಗಳಾದ ನಾಗಮೋಹನ್‌ದಾಸ್,ಪಿ.ಗೋಪಾಲಗೌಡ,ಸಚಿವ ಕೆ.ಎಚ್.ಮುನಿಯಪ್ಪ,ಇಸ್ರೋ ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ‌್ಯಕ್ರಮದಲ್ಲಿ ರಾಜ್ಯದ 43 ಸಾಧಕರಿಗೆ ಪ್ರಶಸ್ತಿ ಪ್ರದಾ ನ ಮಾಡಲಾಗುವುದೆಂದು ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಮ್,ಕಾರ್ಯದರ್ಶಿ ಪಿ.ಲೋಕೇಶ್ ತಿಳಿಸಿದ್ದಾರೆ.

(ಸಿಟಿಡಿ 22 ಜಿ.ಎಸ್.ಶಾಂತಕುಮಾರ್)ಮಗ್‌ಶಾಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net