25ಕ್ಕೆ ಎಸ್‌ಡಿಎಂ ಕಾಲೇಜಿಗೆ ಕಂಚಿಶ್ರೀ ಆಗಮನ

25ಕ್ಕೆ ಎಸ್‌ಡಿಎಂ ಕಾಲೇಜಿಗೆ ಕಂಚಿಶ್ರೀ ಆಗಮನ
Published on

ಹಾಸನ: ಕಂಚಿ ಶ್ರೀ ಕಾಮಕೋಟಿ ಪೀಠಾಧ್ಯಕ್ಷರಾದ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳು ನಗರದ ತಣ್ಣೀರು ಹಳ್ಳದ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆವರಣಕ್ಕೆ ನ.25ರಂದು ಆಗಮಿಸಿ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಸಾನಿಧ್ಯ ವಹಿಸಲಿದ್ದಾರೆ ಎಂದು ಎಸ್‌ಡಿಎಂ ಕಾಲೇಜಿನ ಅಧಿಕಾರಿ ಪ್ರಸನ್ನ ಎನ್.ರಾವ್ ತಿಳಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 25ರಂದು ನಮ್ಮ ಕಾಲೇಜಿನ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗಡೆಯವರ ಹುಟ್ಟು ಹಬ್ಬದ ಅಂಗವಾಗಿ ಹಾಸನದ ರೆಡ್ ಕ್ರಾಸ್ ಅಂತಾರಾಷ್ಟ್ರೀಯ ಸೊಸೈಟಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಎಚ್‌ಡಿಎಫ್‌ಸಿ. ಬ್ಯಾಂಕ್ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದರು.

ಕಾರ್ತಿಕ ಕೊನೆಯ ಸೋಮವಾರದಂದು ಸಂಜೆ ವಿಶೇಷ ಪೂಜಾ ಕಾರ್ಯಗಳು ನೆರವೇರಲಿದೆ. ನವೆಂಬರ್ 26ರ ಮಂಗಳವಾರ ಬೆಳಿಗ್ಗೆ ಸಮಯದಲ್ಲಿ ನೂತನ ವಿದ್ಯಾರ್ಥಿಗಳಿಗೆ ಶಿಷ್ಯ ಉಪಯನ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಾರ್ಯಕ್ರಮದಲ್ಲಿ ಕಂಚಿಶ್ರೀ ಸಾನಿಧ್ಯ ವಹಿಸಲಿದ್ದಾರೆ. ಇದೇ ತಿಂಗಳ 7 ರಿಂದ 9ರವರೆಗೆ ನಡೆದ ಕಾರ್ಯಕ್ರಮದಲ್ಲಿ ಕಂಚಿಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡಿದ್ದರು. ನಂತರದಲ್ಲಿ ಇನ್ನಷ್ಟು ಜನರು ಸ್ವಾಮೀಜಿ ಆಶೀರ್ವಾದ ಪಡೆಯಬೇಕೆಂದು ಅಪೇಕ್ಷೆಪಟ್ಟ ಹಿನ್ನಲೆಯಲ್ಲಿ ಮತ್ತೆ ಸ್ವಾಮೀಜಿಯವರನ್ನು ಆಮಂತ್ರಿಸಲಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂ ಕಾಲೇಜು ಪ್ರಾಂಶುಪಾಲರಾದ ಡಾ. ಯು. ಶೈಲಜಾ ಪ್ರಸನ್ನ ಎನ್. ರಾವ್, ಸಹ ಪ್ರಾಧ್ಯಾಪಾಕ ಗುರುಬಸವರಾಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net