

ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವೃದ್ಧ ಮತ್ತು ಅನಾಥಾಶ್ರಮದಲ್ಲಿ ಗುರುವಾರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆಯ ಗೌರವಾಧ್ಯಕ್ಷ ಎಸ್.ಸುರೇಶ್‌ಗೌಡ ಮತ್ತು ಎಂ.ಎಸ್.ಜಯಮ್ಮ ದಂಪತಿಯ 25ನೇ ಮದುವೆ ವಾರ್ಷಿಕೋತ್ಸವ ಆಚರಿಸಲಾಯಿತು.
ರವಿ ಸಂತು ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶ್ರಮಕ್ಕೆ ಕುಕ್ಕರ್, ಊಟದ ತಟ್ಟೆಗಳನ್ನು ಕೊಡುಗೆ ನೀಡಲಾಯಿತು. ಮೈಸೂರಿನ ಇಂಡಿಯನ್ ಕೇಕ್ ಹೌಸ್ ಮಾಲೀಕ ಭರತ್‌ಗೌಡ ಅವರಿಂದ ಆಶ್ರಮದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯಿತು.
ಪ್ರಮುಖರಾದ ರವಿ ಸಂತು, ಉದ್ಯಮಿ ಶರಣಗೌಡ, ಕಲಾವಿದರಾದ ಘಟಂ ಕೃಷ್ಣ, ಉಮ್ಮತ್ತೂರು ಬಸವರಾಜು, ಸುರೇಶ್‌ನಾಗ್, ವಕೀಲ ಸಿದ್ದರಾಜು, ಎಂಎಂಎಲ್ ಜಿಎಂ ನಿರ್ಮಲ್‌ಕುಮಾರ್, ವೆಂಕಟರಮಣ ಪಾಪು ಇತರರಿದ್ದರು.