ಮಕ್ಕಳಿಗೆ ವಾಹನ ಚಲಾಯಿಸಲು ಕೊಟ್ಟ ಪಾಲಕರಿಗೆ 25 ಸಾವಿರ ರೂ.ದಂಡ ವಿಧಿಸಿದ ನ್ಯಾಯಾಲಯ

FB_IMG_1694790743341.jpg
Published on

ಬೆಳಗಾವಿ : ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡಿದ ಪಾಲಕರೊಬ್ಬರಿಗೆ ಬೆಳಗಾವಿಯ ಆರನೇ ಜೆಎಂಎಫ್‌ಸಿ ನ್ಯಾಯಾಲಯ   ಗುರುವಾರ 25 ಸಾವಿರ ದಂಡ ವಿಧಿಸಿದೆ.  
ನಗರದ ಹಲವು ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಚಲಾಯಿಸಲು ಅವಕಾಶ ನೀಡುವುದು ಇತ್ತೀಚೆಗೆ ಹೆಚ್ಚಾಗಿದ್ದು, ಅಪ್ರಾಪ್ತರು ವಾಹನ ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
 ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ತಪ್ಪಿತಸ್ಥ ಪಾಲಕರಿಗೆ 25 ಸಾವಿರ ರೂ.ದಂಡ ವಿಧಿಸುವುದರ ಜತೆಗೆ ಎಚ್ಚರಿಕೆ ನೀಡಿದೆ.  ಕಳೆದ ವಾರ ವಾಹನ ಚಲಾಯಿಸುವಾಗ ಸಿಕ್ಕಿಬಿದ್ದ ಇಬ್ಬರು ಅಪ್ರಾಪ್ತರಿಗೆ ಸಂಚಾರ ಪೊಲೀಸರು ಹೂವು ನೀಡಿ ಎಚ್ಚರಿಕೆ ಕೊಟ್ಟಿದ್ದರು. ಈ ಬಾರಿ ನ್ಯಾಯಾಲಯ ದಂಡ ವಿಧಿಸಿದ್ದ ರಸೀದಿಯನ್ನು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಉಳಿದ ಪಾಲಕರಿಗೂ ಜಾಗೃತಿ ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net