

ಹುಮನಾಬಾದ್: ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಘಾಟಬೋರಾಳ ಗ್ರಾಮದಲ್ಲಿ ಸೋಮವಾರ ೨೦೨೪-೨೫ರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೊ ಯೋಜನೆಯಡಿ ಅಂದಾಜು ೨೫ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಊರಲ್ಲಿ ಈಗಾಗಲೇ ಅನೇಕ ಪ್ರಗತಿಪರ ಕಾರ್ಯಗಳು ಮುಗಿದಿವೆ. ಗ್ರಾಮಸ್ಥರ ಬೇಡಿಕೆಯಂತೆ ಹಂತ ಹಂತವಾಗಿ ಕೆಲಸ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಘಂಟೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಜಿಲ್ಲಾ ಕೃಷಿಕ ಸಮಾಜ ಮಾಜಿ ಅಧ್ಯಕ್ಷ ಅಭಿಮನ್ಯು ನಿರಗುಡಿ, ಪ್ರಮುಖರಾದ ನಾಮದೇವ ಮುಳೆ, ಶಿವಾಜಿ ರಾಘು, ಪ್ರಮೋದ ಮುಳೆ, ಸಾಯಿ ಹಂಡಗೆ, ಸಚಿನ್ ದಾಡಗೆ, ರತನ್ ಜಂಕು, ಬಸವರಾಜ ಸ್ವಾಮಿ, ಹರೀಶ ಮಾನಕಾರೆ, ತಾನಾಜಿ ಭೋಸಲೆ, ನಾಗು ಕೋಟೆ, ಗೋವಿಂದ ರಾಘು, ನಾಗಭೂಷಣ ಸಂಗಮ, ಸುನೀಲ ಪತ್ರಿ, ದಿನಕರ ಮಾನಕಾರೆ ಇತರರಿದ್ದರು. ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಹೈಮಾಸ್ಟ್ ದೀಪಗಳನ್ನು ಶಾಸಕರು ಲೋಕಾರ್ಪಣೆ ಮಾಡಿದರು.
ಬಳಿಕ ಹಂದಿಕೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಕೆಕೆಆರ್‌ಡಿಬಿ ಅಕ್ಷರ ಆವಿಷ್ಕಾರದಡಿ ಮಂಜೂರಾಗಿದ್ದ ಡಿಜಿಟಲ್ ತಂತ್ರಜ್ಞಾನದ ಎಲ್ಇಡಿ ಪ್ರೊಜೆಕ್ಟರ್, ಗ್ರೀನ್ ಸಾಫ್ಟ್ ಬೋರ್ಡ್ ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಕ್ರೀಡಾ ಪೀಠೋಪಕರಣಗಳನ್ನು ವಿತರಿಸಿದರು. ನಂತರ ಹಂದಿಕೇರಾ ವಾಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.
ಪ್ರಮುಖರಾದ ದಿಲೀಪ ಸಾಟೆ, ವಿನಾಯಕ ಮಂಕೋಜಿ, ನೀಲಕಂಠ ಡೊಳ್ಳೆ, ತುಕಾರಾಮ, ಭೀಮಶಾ ಕರಣಗೆ, ಭಗವಾನ್ ದಾಡಗೆ, ಗಣೇಶ ಠಾಕೂರ್, ಗೋವಿಂದ ಭೋಸಲೆ, ತಾನಾಜಿ ಪವಾರ್ ಇತರರಿದ್ದರು.