252 ಹೊಸ ಪ್ರಕರಣ ಪತ್ತೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 252 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8795ಕ್ಕೇರಿದ್ದು, 6268 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2266 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 261ಕ್ಕೆ ಏರಿದೆ.

ಶುಕ್ರವಾರ ಪ್ರಕಟಗೊಂಡ ಪ್ರಯೋಗಾಲಯದ ವರದಿಯಲ್ಲಿ ಹುಬ್ಬಳ್ಳಿಯಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ ಅಂದಾಜು 45 ಪ್ರಕರಣಗಳು ದಾಖಲಾಗಿದ್ದರೆ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಅಂದಾಜು 50 ಸ್ಥಳಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.

ಕಲಘಟಗಿ ತಾಲೂಕಿನ ರಾಮನಾಳ, ದೇವಿಕೊಪ್ಪ ಗೌಡರ ಓಣಿ, ಕೆರಿ ಓಣಿ, ಜೋಡಳ್ಳಿ ಗ್ರಾಮ, ಹಿರೇಹೊನ್ನಳ್ಳಿ, ಮುಕ್ಕಲ ಸಿಟಿ ಸೆಂಟರ್; ಕುಂದಗೊಳದ ತಾಲೂಕು ಆಸ್ಪತ್ರೆ, ಕಳಸಣ್ಣವರ ಓಣಿ, ಶೆಟ್ಟರ್ ಓಣಿ, ಬೆಟದೂರ ಕೊಪ್ಪದರ ಓಣಿ, ನೆಹರುನಗರ, ಕಮಡೊಳ್ಳಿ ಗ್ರಾಮ, ರಾಣಿ ಚನ್ನಮ್ಮ ಸ್ಕೂಲ್, ಪಾಲಿಕೊಪ್ಪ, ಗುಡಗೇರಿ, ಬರದ್ವಾಡ ರಸ್ತೆ, ರಾಮನಕೊಪ್ಪ ಗ್ರಾಮ, ಶರೇವಾಡ, ಕುಬಿಹಾಳ ಗ್ರಾಮ, ಬೆಟದೂರ ನಡುಓಣಿ, ದ್ಯಾವನೂರ ಜೈ ಹನುಮಾನ ನಗರ; ನವಲಗುಂದದ ನವಲಗುಂದ ಓಣಿ, ಶಾನವಾಡ ಗ್ರಾಮ, ಗುಮ್ಮಗೋಳ ಗ್ರಾಮ, ಹೊಸಕಟ್ಟಿ ಕುರುಬರ ಓಣಿ, ಬೆಳವಟಗಿ ಗ್ರಾಮ, ತುಪ್ಪದಕುರಹಟ್ಟಿ, ಕುಂಬಾರ ಓಣಿ, ಕೆವಿಜಿ ಬ್ಯಾಂಕ್, ಶಲವಡಿ ಹೊಸಪೇಟಿ ಓಣಿ, ಶಾನುಭೋಗರ ಓಣಿ, ನಾಯಕನೂರ ಮಾದರ ಓಣಿ, ಬಸವೇಶ್ವರ ಗುಡಿ, ಹುಡೇದಗಡ್ಡಿ ಓಣಿ, ಪಡೆಸೂರ, ಭದ್ರಾಪುರ, ಅಣ್ಣಿಗೇರಿಯ ಜಾಡರ ಓಣಿಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.

ಅನ್ಯ ಜಿಲ್ಲೆಗಳ ಹತ್ತಾರು ಜನ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಕಿಮ್ಸ್​ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಶುಕ್ರವಾರ ಕಿಮ್್ಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳು ಹಾಗೂ ಆರ್​ಟಿಪಿಸಿಆರ್ ಟೆಸ್ಟ್ಗಳ ಬಗ್ಗೆ ಮಾಹಿತಿ ಪಡೆದರು.

ಕಿಮ್ಸ್​ನಲ್ಲಿ 630 ಬೆಡ್​ಗಳಿಗೆ ಆಕ್ಸಿಜನ್ ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ. 100 ವೆಂಟಿಲೇಟರ್ ಸೌಲಭ್ಯದ ಐಸಿಯು ವಾರ್ಡ್ ಸಿದ್ಧಪಡಿಸಲಾಗಿದೆ. ಕೊಪ್ಪಳ, ಹಾವೇರಿ, ಸವದತ್ತಿ, ಗದಗ ಸೇರಿ ಹಲವು ಜಿಲ್ಲೆಗಳಿಂದ ಕೊವೀಡ್ ರೋಗಿಗಳು ಇಲ್ಲಿ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೊವೀಡ್ ರೋಗಿಗಳ ಮರಣ ಪ್ರಮಾಣ ಶೇ.5ರಷ್ಟಿದೆ. ನಿತ್ಯ 2 ಸಾವಿರಕ್ಕೂ ಅಧಿಕ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ವಿವರಿಸಿದರು.

ಕಿಮ್್ಸ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರೀಕೃತ ಆಮ್ಲಜನಕ ಸರಬರಾಜು ಘಟಕ ವೀಕ್ಷಿಸಿದ ಗೌರವ ಗುಪ್ತಾ, ಅದರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

20 ಕೆಎಲ್ ಸಾಮರ್ಥ್ಯದ ವೈದ್ಯಕೀಯ ದ್ರವ ಆಮ್ಲಜನಕ ಘಟಕ ಇದಾಗಿದೆ. ದ್ರವ ರೂಪದ ಆಮ್ಲಜನಕವನ್ನು ಅನಿಲ ರೂಪಕ್ಕೆ ಪರಿವರ್ತಿಸಿ ಸರಬರಾಜು ಮಾಡಲು 400 ಎನ್​ಎಂಕ್ಯೂ ಸಾಮರ್ಥ್ಯದ ಆವಿ ಪರಿವರ್ತಕವನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದ ಬಳಕೆಗೆ ಆಮ್ಲಜನಕದ ಸಿಲಿಂಡರ್​ಗಳನ್ನು ಸಿದ್ಧವಿರಿಸಲಾಗಿದೆ ಎಂದು ಪರಿಸರ ಅಭಿಯಂತರ ಅಖಿಲ ಕುಮಾರ್ ವಿವರಿಸಿದರು.

ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ತಹಶೀಲ್ದಾರ ಶಶಿಧರ ಮಾಡ್ಯಾಳ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net