ರೈತ ಬಣಗಳು ಒಗ್ಗೂಡಿದರೆ ಹೋರಾಟಕ್ಕೆ ಬಲ

CTD RITA -SUNDARESH-----
Published on

ಚಿತ್ರದುರ್ಗ: ರೈತರ ಮೇಲಿನ ಶೋಷಣೆ ವಿರುದ್ಧ ರೈತ ನಾಯಕ ಎನ್.ಡಿ. ಸುಂದರೇಶ್ ಸಿಡಿದೇಳುತ್ತಿದ್ದ ದಿಟ್ಟ ಹೋರಾಟಗಾರ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ನಾಯಕ ಸುಂದರೇಶ್ ಸ್ಮರಣೋತ್ಸವದಲ್ಲಿ ಮಾತನಾಡಿ, ಎಚ್.ಎಸ್.ರುದ್ರಪ್ಪ,ಪ್ರೊ. ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ್ ಸಮಕಾಲೀನರಾಗಿದ್ದ ಸುಂದರೇಶ್ ಸರಳ ವ್ಯಕ್ತಿತ್ವದವರಾಗಿದ್ದರು ಎಂದರು.

ರೈತರ ಸಂಘಟನೆಗೆ ಹಳ್ಳಿ, ಹಳ್ಳಿಗೆ ತಿರುಗುತ್ತಿದ್ದರು. ರೈತರ ಬೆವರಿಂದ ಕಟ್ಟಿದ ರಾಜ್ಯ ರೈತ ಸಂಘವೀಗ ಅನೇಕ ಬಣಗಳಾಗಿರುವುದು ನೋವಿನ ಸಂಗತಿ. ಸುಂದರೇಶ್ ಅವರ ಆಶಯದಂತೆ ಎಲ್ಲ ಬಣಗಳು ಒಗ್ಗೂಡ ಬೇಕಿದೆ ಎಂದರು.

ಆರ್.ಬಿ. ನಿಜಲಿಂಗಪ್ಪ ಮಾತನಾಡಿ, ವಿಭಜಿತ ರೈತ ಬಣಗಳೆಲ್ಲವೂ ಒಂದಾಗಿ ಸುಂದರೇಶ್ ಅವರ ಹೋರಾಟದ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಚಿಕ್ಕಬ್ಬಿಗೆರೆ ನಾಗರಾಜ್, ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿದರು.

ಮರ‌್ಲಹಳ್ಳಿ ರವಿಕುಮಾರ್, ನಾಗರಾಜ್ ಮುದ್ದಾಪುರ, ಎಂ.ಬಿ. ಪ್ರಶಾಂತ ರೆಡ್ಡಿ, ಹೊನ್ನೂರು ಶ್ರೀನಿವಾಸ್, ಸಿದ್ದಬಸಣ್ಣ, ಎಂ.ಸಿ. ಚನ್ನಕೇಶವ, ಬಿ. ಸುರೇಶ್, ಅಜ್ಜಣ್ಣ, ಶಿವಣ್ಣ, ಅಂಬರೀಶ್, ಡಿ.ಟಿ. ಮಂಜಣ್ಣ ಹಿರೇಹಳ್ಳಿ, ಹಿರೇಹಳ್ಳಿ ತಿಪ್ಪೇಸ್ವಾಮಿ, ಕೆ.ಎಸ್. ಕೊಟ್ರಬಸಪ್ಪ, ಕೆ.ಎಂ. ಕಾಂತರಾಜು, ಎನ್. ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net