

ಬೆಳಗಾವಿ: ನ್ಯೂ ಇಂಡಿಯನ್ ಕ್ರ್‌ಟಾ ಎಕ್ಸ್‌ಪೋ ಕೈ ಮಗ್ಗ ಹಾಗೂ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಇಲ್ಲಿನ ಸದಾಶಿವನಗರದ ಲಕ್ಷ್ಮಿ ಕಾಂಪ್ಲೆಕ್ಸ್ ಬಳಿ ಈಚೆಗೆ ಉದ್ಘಾಟನೆಗೊಂಡಿದೆ.
ಸಂಗೀತಾ ಹ್ಯಾಂಡ್ಲೂಮ್ ಅಂಡ್ ಹತ್ಕರ್ಗ ವೆಲ್ಫೇರ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗಿರುವ ಎಕ್ಸ್‌ಪೋವನ್ನು ಶಾಸಕ ಆಸ್ಿ ಸೇಠ್ ಉದ್ಘಾಟಿಸಿ ಮಾತನಾಡಿದರು. ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು ,ಬಟ್ಟೆ ಸಹಿತ ವಿವಿಧ ವಸ್ತುಗಳ ಒಂದೇ ಸೂರಿನಡಿ ಲಭ್ಯವಿದ್ದು, ನಗರದ ಜನರಿಗೆ ಇದೊಂದು ಉತ್ತಮ ಅವಕಾಶ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಕಾಶ ಕಾಲಕುಂದ್ರಿಕರ ಮಾತನಾಡಿ, ಈ ಪ್ರದರ್ಶನವು 40 ದಿನಗಳವರೆಗೆ ಇರುತ್ತದೆ. ಮತ್ತು ಇಡೀ ಕುಟುಂಬವು ಒಂದೇ ಸ್ಥಳದಲ್ಲಿ ಶಾಪಿಂಗ್ ಮಾಡಬಹುದು. ಪ್ರವೇಶ ಮತ್ತು ವಾಹನ ಪಾಕಿರ್ಂಗ್ ಉಚಿತವಾಗಿದೆ, ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿವಿಧ ಬಗೆಯ ಪುಸ್ತಕಗಳು ಲಭ್ಯವಿದೆ. ಪ್ರದರ್ಶನದಲ್ಲಿ ದೇಶಾದ್ಯಂತ 100 ಕ್ಕೂ ಹೆಚ್ಚು ಮಳಿಗೆದಾರರು ಭಾಗವಹಿಸಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾನಾ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳು ಈ ಪ್ರದರ್ಶನದಲ್ಲಿ ಯೋಗ್ಯ ಬೆಲೆಯಲ್ಲಿ ಲಭ್ಯವಿದೆ ಎಂದರು.
ಅಶುತೋಷ್ ಶರ್ಮಾ, ಅಸ್ಲಂ ಮನ್ಸೂರಿ, ಮೈನುದ್ದೀನ್ ಗುಲಾಬ್ ಖಾನ್, ಅಶ್ಪಾಕ್ ಮುಲ್ಲಾ ಇತರರಿದ್ದರು.