ಅಪ್ರಾಪ್ತನಿಗೆ ವಾಹನ ಕೊಟ್ಟ ಮಾಲೀಕನಿಗೆ 25000 ರೂ. ದಂಡ

traffic police fine
ಶಿವಮೊಗ್ಗದಲ್ಲಿ ನಂದಿನಿ ಹಾಲಿನ ವಾಹನದ ಮಾಲೀಕನಿಗೆ ದಂಡ ವಿಧಿಸಿದ ನ್ಯಾಯಾಲಯ.
Published on

ಶಿವಮೊಗ್ಗ: ನಗರದಲ್ಲಿ ಸಮವಸ್ತ್ರ ಧರಿಸದೇ ಅಪ್ರಾಪ್ತನ ಕೈಯಲ್ಲಿ ವಾಹನ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ ಶಿವಮೊಗ್ಗದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶನಿವಾರ 25,500 ರೂ. ದಂಡ ವಿಧಿಸಿದೆ. ಟಿಪ್ಪುನಗರದ ಧನುಷ್(35) ಎಂಬುವರ ಬಳಿ ಹಾಲಿನ ವಾಹನವಿದ್ದು ಅದನ್ನು ಅಪ್ರಾಪ್ತನ ಕೈಗೆ ನೀಡಿದ್ದರು.

ಶುಕ್ರವಾರ ಸಂಜೆ ನಗರದ ಆಮೀರ್ ಅಹಮ್ಮದ್ ವೃತ್ತದಲ್ಲಿ ಪಶ್ಚಿಮ ಸಂಚಾರ ಠಾಣೆ ಎಎಸ್‌ಐ ಮೋಹನ್ ಮತ್ತು ಕಾನ್ಸ್‌ಟೇಬಲ್ ಕಿರಣ್ ವಾಹನಗಳ ತಪಾಸಣೆ ಮಾಡುವಾಗ ನಂದಿನಿ ಹಾಲಿನ ವಾಹನವನ್ನು ತಡೆದು ಪರಿಶೀಲಿಸಿದ್ದರು.
ಈ ವೇಳೆ ವಾಹನಕ್ಕೆ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ವಾಹನ ಚಾಲನೆ ಮಾಡುತ್ತಿದ್ದವರು ಸಮವಸ್ತ್ರ ಧರಿಸಿರಲಿಲ್ಲ. ಅಲ್ಲದೆ, ಆತ 17 ವರ್ಷದ ಬಾಲಕನಾಗಿದ್ದ. ಪಶ್ಚಿಮ ಠಾಣೆ ಪಿಎಸ್‌ಐ ತಿರುಮಲೇಶ್ ಅವರು ವಾಹನದ ಮಾಲೀಕ ಧನುಷ್ ಮೇಲೆ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಶನಿವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ವಾಹನದ ಮಾಲೀಕನಿಗೆ ದಂಡ ವಿಧಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net