250 ಕನ್ನಡ ಧ್ವಜಗಳ ಕೊಡುಗೆ

29Rajesh4
Published on

ಚಾಮರಾಜನಗರ: ಜಿಲ್ಲಾ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಾಡಗೀತೆ ರಚನೆ ಮಾಡಿ, 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆದರ್ಶ ಶಾಲೆಯ ಮಕ್ಕಳು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಲಿದ್ದು, ಮಕ್ಕಳ ಕೈಯಲ್ಲಿ ನಾಡ ಧ್ವಜ ಇರಬೇಕೆಂಬ ಉದ್ದೇಶದಿಂದ ಜಿಲ್ಲಾ ಕನ್ನಡ ಸಂಘದಿಂದ 250 ಕನ್ನಡ ಧ್ವಜಗಳನ್ನು ಕೊಡುಗೆಯಾಗಿ ನೀಡಲಾಯಿತು.

ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ನಾಡಗೀತೆ ಹಾಡುವ ನಗರದ ಸಮೀಪದ ಮಲ್ಲಯ್ಯನಪುರ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಈ ನಾಡ ಧ್ವಜವನ್ನು ನೀಡುವಂತೆ ಅವರು ಮಾಡಿದರು.

ನ.1 ರಂದು ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಅವರು 1925ರದಲ್ಲಿ ನಾಡಗೀತೆಯನ್ನು ರಚನೆ ಮಾಡಿದ್ದರು. ಇದರ ಸವಿನೆನಪಿವಾಗಿ ನೂರು ವರ್ಷಗಳ ನಾಡಗೀತೆಯನ್ನು 250ಕ್ಕೂ ಹೆಚ್ಚು ಮಕ್ಕಳು ಸಾಮೂಹಿಕವಾಗಿ ಹಾಡಲು ತಯಾರಿ ಮಾಡಲಿಕೊಳ್ಳಲಾಗಿದೆ. ಹೀಗಾಗಿ ಈ ಮಕ್ಕಳ ಕೈಯಲ್ಲಿ ನಾಡ ಧ್ವಜ ಇರಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಾಡಧ್ವಜವನ್ನು ಕೊಡುಗೆಗೆ ನೀಡುವಂತೆ ಜಿಲ್ಲಾ ಕನ್ನಡ ಸಂಘವನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಂಘದ ಅಧ್ಯಕ್ಷ ಸಿ.ಎ. ಮಹದೇವಶೆಟ್ಟಿ ಹಸ್ತಾಂತರ ಮಾಡಿದರು.

ಡಿಡಿಪಿಐ ಚಂದ್ರಕಾಂತ್‌ಪಾಟೀಲ್, ಬಿಇಒ ಹನುಮಶೆಟ್ಟಿ, ಕನ್ನಡ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ವೆಂಕಟರಮಣನಾಯಕ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಸಹ ಕಾರ್ಯದರ್ಶಿ ಮಲ್ಲೇಶ್ ಎಲ್‌ಐಸಿ, ನಗರಸಭಾ ಸದಸ್ಯ ಮನೋಜ್ ಪಟೇಲ್, ಆರ್.ವಿ. ಮಹದೇವಪ್ಪ, ಶ್ರೀಚಾಮರಾಜೇಶ್ವರ ಸ್ವಾಮಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘು, ಕೃಷ್ಣ, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net