

ಕನಕಗಿರಿ: ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನಿಜಸುಖಿ ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ, ಬಸವಣ್ಣ ಅವರ ಆಪ್ತರಾಗಿ ಕೆಲಸ ನಿರ್ವಹಿಸಿದ್ದರು ಎಂದು ಹಡಪದ ಸಮಾಜದ ಮುಖಂಡ ಬಸವರಾಜ ಹಡಪದ ಹೇಳಿದರು.
ಇದನ್ನೂ ಓದಿ: ಸಮಾನತೆಗೆ ದುಡಿದ ಶರಣ ಹಡಪದ ಅಪ್ಪಣ್ಣ
ಪಟ್ಟಣದ ಬಸರಿಹಾಳ ರಸ್ತೆಯಲ್ಲಿನ ಹಡಪದ ಅಪ್ಪಣ್ಣ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದರು.
ಅಪ್ಪಣ್ಣನವರು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮೂಢನಂಬಿಕೆಯ ವಿರುದ್ಧ ಹೋರಾಡಿರುವ ಅಪ್ಪಣ್ಣ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ.
ಶರಣರು 12ನೇ ಶತಮಾನದ ವಚನ ಚಳಿವಳಿಗಾರ ಹಾಗೂ ಸಾಮಾಜಿಕ ಕ್ರಾಂತಿಕಾರಿಯಾಗಿದ್ದರು ಇಂತಹ ದಾರ್ಶನಿಕರ ವಿಚಾರಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದು, ಇಂದಿನ ಯುವ ಸಮೂಹ ತತ್ತ್ವಾದರ್ಶ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಪ್ರಮುಖರಾದ ಪಂಪಾಪತಿ ಹಡಪದ, ವಿರುಪಣ್ಣ, ವಿಜಯಕುಮಾರ, ಉಮೇಶ ಅಳ್ಳಳ್ಳಿ, ಸಿದ್ದು ವಿಜಯಪುರ, ಮಲ್ಲಿಕಾರ್ಜುನ, ಸತೀಶ ಹಡಪದ, ಪಂಪಾಪತಿ ಕಂಪ್ಲಿ, ಹನುಮೇಶ, ಶರಣಪ್ಪ ತಿಪ್ಪನಾಳ ಇತರರು ಇದ್ದರು.