

ಸಿರಗುಪ್ಪ: ನೂರು ಕಿಲೋ ವ್ಯಾಟ್‌ಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಒತ್ತಾಯಿಸಿ ತೆಕ್ಕಲಕೋಟೆ ಪಟ್ಟಣದ 3ನೇ ವಾರ್ಡ್ ನಿವಾಸಿಗಳು ಜೆಇ ಯಲ್ಲಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಪಂ ಸದಸ್ಯ ನಸರುದ್ದೀನ್ ಮಾತನಾಡಿ, ಮೂರನೇ ವಾರ್ಡ್‌ನಲ್ಲಿ ಸದ್ಯ ಅಳವಡಿಸಿರುವ 100 ಕಿವಾ ಟಿಸಿಯು ಪದೇಪದೆ ದುರಸ್ತಿಗೆ ಬರುತ್ತಿದೆ. ಕಳೆದೊಂದು ತಿಂಗಳಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. 100 ಕಿವಾ ಟಿಸಿ ಇದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಸಂಪರ್ಕ ಕೊಡುವುದರಿಂದ ಲೋಡ್ ಹೆಚ್ಚಾಗಿ ಟಿಸಿ ಕೆಟ್ಟು ಹೋಗುತ್ತಿದೆ.
ಇದರಿಂದ ವಾರ್ಡ್‌ನ ಜನರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ 250 ಕಿಲೋ ವ್ಯಾಟ್‌ನ ಟಿಸಿಯನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಯೂನುಸ್, ನಾಗರಾಜ, ಸುಬಾನ್, ಆಜಂ, ಮಾಬಾಷಾ, ರಜಾಕ್, ಚಾಂದ್‌ಬಾಷಾ ಇತರರಿದ್ದರು.