25 ದಿನ ಪೂರೈಸಿದ ಗಿರಿನಾಡ ಪ್ರೇಮಿ ಸಿನಿಮಾ

Yuvaraj
Published on

ಕಲಬುರಗಿ: ಸ್ಥಳೀಯ ಕಲಾವಿದರು, ತಂತ್ರಜ್ಞರ ತಂಡವನ್ನು ಕಟ್ಟಿಕೊಂಡು ಮದುರ ಪ್ರೀತಿಯ ವಿಷಯಾಧಾರಿತವಾಗಿ ನಿರ್ಮಿಸಿರುವ ಗಿರಿನಾಡ ಪ್ರೇಮಿ ಸಿನಿಮಾ ಯಶಸ್ವಿಯಾಗಿ ೨೫ ದಿನ ಪ್ರದರ್ಶನ ಕಂಡಿದೆ ಎಂದು ಚಿತ್ರದ ನಿರ್ದೇಶಕ ಯುವರಾಜ ಗುತ್ತೇದಾರ್ ತಿಳಿಸಿದರು.
ಮಾ.೧ರಂದು ಬಿಡುಗಡೆ ರಾಜ್ಯದ ೨೫ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾವೂ, ನಗರದ ಮೀರಜ್ ಥೇಟರ್‌ನಲ್ಲಿ ಸತತ ೨೫ ದಿನದವರೆಗೆ ಪ್ರದರ್ಶನ ಕಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ, ಯಾದಗಿರಿ, ಮೈಲಾಪುರ ಸೇರಿ ಈ ಭಾಗದಲ್ಲಿಯೇ ಶೂಟಿಂಗ್ ಮಾಡಿದ್ದು, ಸ್ಥಳೀಯ ತಂಡದವರಿಗೆ ಪ್ರೇಕ್ಷಕರು ನೋಡಿ, ಉತ್ತಮ ಸ್ಪಂದನೆ ನೀಡಿ ಕೈಹಿಡಿದುರುವುದು ಖುಷಿ ನೀಡಿದೆ. ಮೂರು ವರ್ಷ ಚಿತ್ರೀಕರಣ ಮಾಡಲಾಗಿತ್ತು. ಹಲವು ಸವಾಲು, ಸಮಸ್ಯೆಗಳ ಮಧ್ಯೆ ಚಿತ್ರ ಪೂರ್ಣಗೊಂಡು ಪ್ರದರ್ಶನವಾಗುತ್ತಿದೆ. ಬಡ, ಪ್ರತಿಭಾವಂತ, ಪ್ರಯತ್ನ ಮಾಡುತ್ತಿರುವ ಕಲಾವಿದರಿಗೆ ಸಹಕಾರ ದೊರಕಿದೆ ಎಂದರು.
ಚಿತ್ರಕ್ಕೆ ಸುಮಾರು ೩೫ ಲಕ್ಷ ರೂ. ವೆಚ್ಚ ಮಾಡಿದ್ದು, ಸುಮಾರು ೧೦ ಲಕ್ಷ ರೂ. ಪ್ರಮೋಷನ್‌ಗೆ ಖರ್ಚು ಮಾಡಲಾಗಿದೆ. ಹೊಸ ಚಿತ್ರಗಳನ್ನು ಮಾಡುವ ಆಶಯವಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರೋತ್ಸಾಹ ಇರಲಿ ಎಂದು ಮನವಿ ಮಾಡಿದರು.
ನಾಯಕ ನಟ ಶರಣು ಪಟ್ಟೇದಾರ, ಪ್ರವೀಣ ಹಿರೇಮಠ, ಶರಣು ಶೆಟ್ಟಿ, ಅಶೋಕ ಚಿಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net