25 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಪ್ರತಿವರ್ಷ ಉಚಿತ ಔಷಧ ನೀಡುತ್ತಿದ್ದ ಬಡವರ ಡಾಕ್ಟರ್ ಜಾವೇದ್ ಅಲಿ ಜುನೈದ್ ನಿಧನ

120920 Astama Dr. Javed Ali Junaid Died
ರಾಯಚೂರು ಬಡವರ ಡಾಕ್ಟರ್ ಜಾವೇದ್ ಅಲಿ ಜುನೈದ್.
Published on

ರಾಯಚೂರು: ಕಳೆದ 25 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಪ್ರತಿವರ್ಷ ಉಚಿತ ಔಷಧ ನೀಡುತ್ತಾ ಬಂದಿದ್ದ ಹೋಮಿಯೋಪತಿ ವೈದ್ಯ ಡಾ.ಜಾವೇದ್ ಅಲಿ ಜುನೈದ್ (70) ಶನಿವಾರ ಬೆಳಗ್ಗೆ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಸೇರಿ ಅಪಾರ ಬಂಧುಬಳಗವಿದೆ. ಮೃತರ ಅಂತ್ಯಕ್ರಿಯೆ ಖಬರಸ್ತಾನ್‌ದಲ್ಲಿ ಸಂಜೆ ನೆರವೇರಿಸಲಾಯಿತು. ಕಳೆದ 37 ವರ್ಷದಿಂದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಡವರ ಡಾಕ್ಟರ್ ಎಂದು ಹೆಸರುವಾಸಿಯಾಗಿದ್ದರು. ಕಳೆದ 25 ವರ್ಷದಿಂದ ಪ್ರತಿವರ್ಷ ಜೂನ್‌ನಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ನೀಡುತ್ತಾ ಬರುತ್ತಿದ್ದರು. ಸಾವಿರಾರು ಜನ ಇದರ ಪ್ರಯೋಜನ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net