

ಮೈಸೂರು: ಚಾಮರಾಜ ಕ್ಷೇತ್ರದ ಆಶ್ರಯ ಬಡಾವಣೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಆಗಿರುವ ಖರ್ಚಿನ ಮಾಹಿತಿ ನೀಡಲು ವಿಳಂಬ ಮಾಡಿದ್ದ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-6ರ ಸಹಾಯಕ ಕಂದಾಯ ಅಧಿಕಾರಿ ಎಂ.ಎಸ್.ಸಿದ್ದರಾಜು ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ಜಯನಗರದ ಸಾ.ತಿ.ಸದಾನಂದಗೌಡ ಮಾಹಿತಿ ಕೋರಿ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
362 ದಿನಗಳ ಕಾಲ ಮಾಹಿತಿ ನೀಡಲು ವಿಳಂಬ ಮಾಡಿದ್ದರು. ಈ ಕುರಿತು ಅರ್ಜಿದಾರರು ಆಯೋಗಕ್ಕೆ ದೂರು ನೀಡಿದ್ದರು.
ಇದನ್ನು ವಿಚಾರಣೆ ಮಾಡಿದ ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಸಿ.ಸತ್ಯನ್, ಈ ಅಧಿಕಾರಿಯ ಮುಂದಿನ ತಿಂಗಳ ಸಂಬಳದಲ್ಲಿ 25 ಸಾವಿರ ರೂ. ಹಣವನ್ನು ಏಕಕಂತಿನಲ್ಲೇ ಕಡಿತಗೊಳಿಸಲು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಆ.7ಕ್ಕೆ ಮುಂದೂಡಲಾಗಿದೆ.