

ಹೂವಿನಹಡಗಲಿ: ಇದೇ 26 ರಿಂದ 29ರ ವರೆಗೆ ನಡೆಯಲಿರುವ ಪಟ್ಟಣದ ಗವಿಸಿದ್ಧೇಶ್ವರ ಶಾಖಾ ಮಠದ ಜಾತ್ರೋತ್ಸವ ಅಂಗವಾಗಿ ಬರುವ ಭಕ್ತರಿಗೆ ವಿಶೇಷ ಪ್ರಸಾದ ತಯಾರಿಸಲಾಗುತ್ತಿದೆ.
ಬಾವಿಹಳ್ಳಿ ಗ್ರಾಮದ ಗವಿಶ್ರೀ ಅಕ್ಕನ ಬಳಗದ ಮಹಿಳೆಯರು ಸುಮಾರು 25 ಸಾವಿರ ಶೇಂಗಾ ಹೋಳಿಗೆ ಸಿದ್ಧಪಡಿಸುತ್ತಿದ್ದಾರೆ. ತಾಲೂಕಿನ ಸುತ್ತ ಮುತ್ತಲ ಗ್ರಾಮದ ಜನರು ಮಾದಲಿ, ಜಿಲೇಬಿ ಸೇರಿದಂತೆ ಖಡಕ್ ರೊಟ್ಟಿ, ಕಡ್ಲಿಚಟ್ನಿ ಇತರ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬರಲಿದ್ದಾರೆ.
ಮೂರು ದಿನ ನಡೆಯುವ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಕೋರಿದ್ದಾರೆ.