ಹೊಳೆಆಲೂರಲ್ಲಿ 25 ಗೂಡಂಗಡಿ ತೆರವು

2 hlr1 TERAVU
Published on

ಹೊಳೆಆಲೂರ: ಗ್ರಾಮದ ಬಜಾರ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಹತ್ತಾರು ವರ್ಷಗಳಿಂದ ಅನಧಿಕೃತವಾಗಿ ಹಣ್ಣು, ಹೂವು, ತರಕಾರಿ, ಎಗ್ ರೈಸ್ ಇತ್ಯಾದಿ ವ್ಯಾಪಾರ ಮಾಡಿಕೊಂಡಿದ್ದ 25ಕ್ಕೂ ಹೆಚ್ಚು ಗೂಡಂಗಡಿಗಳನ್ನು ಗುರುವಾರ ತೆರವು ಮಾಡಲಾಯಿತು.
‘ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಮಾನವೀಯ ದೃಷ್ಟಿ ಯಿಂದ ಅಂಗಡಿ ತೆರವುಗೊಳಿಸಬಾರದು’ ಎಂದು ಅಂಗಡಿಕಾರರು ಕೋರಿದರು.
ಜಿಲ್ಲಾ ಅಂಚೆ ಆಧೀಕ್ಷಕ ವಿ.ಜಿ. ಬಂಗಿಗೌಡ್ರ ಹಾಗೂ ಹೊಳೆಆಲೂರ ಅಂಚೆ ಕಚೇರಿ ಪ್ರಧಾನ ವ್ಯವಸ್ಥಾಪಕ ಎಸ್.ಐ. ಈರಗಾರ ಸಮ್ಮುಖದಲ್ಲಿ ಕಾರ್ಯಾಚರಣೆ ಜರುಗಿತು. ಜಿಲ್ಲಾ ಅಂಚೆ ಆಧೀಕ್ಷಕ ವಿ.ಜಿ. ಬಂಗಿಗೌಡ್ರ ಮಾತನಾಡಿ, ಇದು ಅಂಚೆ ಇಲಾಖೆಗೆ ಸೇರಿದ ಜಾಗ. ಇದರ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಅಂಚೆ ಕಚೇರಿ ಸುತ್ತ ಅನಧಿಕೃತವಾಗಿ ಹರಡಿಕೊಂಡಿರುವ ಅಂಗಡಿಗಳಿಂದ ಕಚೇರಿ ಕಟ್ಟಡವೇ ಸಾರ್ವಜನಿಕರಿಗೆ ಕಾಣುತ್ತಿಲ್ಲ. ಗ್ರಾಮ ಸಭೆಯಲ್ಲಿ ತೆರವು ಕಾರ್ಯಾಚರಣೆ ಕುರಿತು ಚರ್ಚೆಯಾಗಿದೆ. ನಾವು ಮುಂಚಿತವಾಗಿ ನೋಟಿಸ್ ನೀಡಿ ಮಾಹಿತಿ ಒದಗಿಸಿದ್ದೇವೆ. ಗ್ರಾಮದ ಸ್ವಚ್ಛತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಕಾರ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net