ಶಿವದಾಸಿಮಯ್ಯ ಸಮುದಾಯ ಭವನಕ್ಕೆ 25 ಲಕ್ಷ ರೂ. ಅನುದಾನ

25 lakhs for Shivdasimaiah Community Bhawan. grant
ಸಿಂದಗಿ ಪಟ್ಟಣದ 1ನೇ ವಾರ್ಡ್‌ನಲ್ಲಿ ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘದ ಸಭಾಭವನ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಶಾಸಕ ಅಶೋಕ ಮನಗೂಳಿ ನೆರವೇರಿಸಿದರು. ಪ್ರೊ.ಶಾಂತೂ ಹಿರೇಮಠ, ಪ್ರಭುಲಿಂಗ ಲೋಣಿ, ಬಂಡಪ್ಪ ಲೋಣಿ, ಅಸೋಕ ಲೋಣಿ ಇತರರಿದ್ದರು.
Published on

ಸಿಂದಗಿ: ನಗರದಲ್ಲಿ ನಿರ್ಮಾಣಗೊಳ್ಳಲಿರುವ ಶಿವದಾಸಿಮಯ್ಯ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸ್ಥಳೀಯ ವಿದ್ಯಾನಗರ ಬಳಿಯ ಲೋಣಿ ಲೇಔಟ್‌ನಲ್ಲಿ ಶಿವದಾಸಿಮಯ್ಯ ಶಿವಶಿಂಪಿ ಸಮಾಜ ವಿಕಾಸ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಶಿವದಾಸಿಮಯ್ಯ ಸಭಾ ಭವನ ಮತ್ತು ಕಾರ್ಯಾಲಯ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕ ಸಮುದಾಯಗಳಲ್ಲಿಯೇ ಮಹತ್ತರವಾದ ಪ್ರತಿಭೆಗಳಿರುತ್ತವೆ. ಇಂತಹ ಸಣ್ಣ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತುಕೊಂಡಿರುವ ನಾನು ಅವರ ಶಿಕ್ಷಣ, ಸಾಮಾಜಿಕ, ಆರೋಗ್ಯ ಸೇರಿದಂತೆ ಇತರ ವಿಷಯಗಳ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದರು.

ಮುಖ್ಯ ಅತಿಥಿ- ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರೊ.ಶಾಂತೂ ಹಿರೇಮಠ ಮಾತನಾಡಿ, ಸಮುದಾಯಗಳು ಒಗ್ಗಟ್ಟಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬಹುದು. ಈ ದಿಸೆಯಲ್ಲಿ ಶಿವಸಿಂಪಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಸಮಾಜದ ಗೌರವಾಧ್ಯಕ್ಷ ಬಂಡೆಪ್ಪ ಲೋಣಿ, ಅಧ್ಯಕ್ಷ ಅಶೋಕ ಲೋಣಿ, ಪ್ರಭುಲಿಂಗ ಲೋಣಿ, ಸಮಾಜದ ಉಪಾಧ್ಯಕ್ಷ ಡಾ.ವಿಶ್ವರಾಧ್ಯ ಶಿವಶಿಂಪಗೇರ ಮಾತನಾಡಿದರು.

ನ್ಯಾಯವಾದಿ ಬಿ.ಜಿ.ನೆಲ್ಲಗಿ, ಮಂಜುನಾಥ ಬಿಜಾಪುರ, ಮಲ್ಲಿಕಾರ್ಜುನ ಲೋಣಿ, ವಿಶ್ವನಾಥ ಶಿವಶಿಂಪಗೇರ, ಮಲ್ಲಿಕಾರ್ಜುನ ಶಿವಶಿಂಪಗೇರ, ವಿಶ್ವನಾಥ ಶಿವಶಿಂಪಗೇರ, ಭೋಜಪ್ಪ ಅತನೂರ, ಶಿವಕುಮಾರ ಶಿವಶಿಂಪಗೇರ, ಗಂಗಾಧರ ಶಿವಶಿಂಪಗೇರ, ಡಾ. ಸಾತಪ್ಪ ಶಿವಶಿಂಪಗೇರ, ಕಾಶೀನಾಥ ಲೋಣಿ, ಸಂಗಪ್ಪ ತಾಳಿಕೋಟಿ, ವಿಜಯಲಕ್ಷ್ಮೀ ಲೋಣಿ, ಸೂರ್ಯಕಾಂತ ಅತನೂರ, ಡಾ.ಬಾಬು ಶಿವಶಿಂಪಗೇರ, ಚಂದ್ರಶೇಖರ ಹರಿಹರ, ಗುರುಪಾದ ಲೊಣಿ, ಸುರೇಶ ಅತನೂರ, ಚೇತನ ಲೋಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net