

ಬೇಲೂರು: 2023-24ನೇ ಸಾಲಿನ ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಗೀತಾ ಲಕ್ಷ್ಮಣ್‌ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೆಚ್ಚುವರಿಯಾಗಿ 25 ಲಕ್ಷ ರೂ. ಸಾಲ ಕೊಡಿಸಲಾಗಿದೆ. ಸಂಘದ ಷೇರುದಾರರು ಮತ್ತು ರೈತರು ಇದರ ಅನುಕೂಲ ಪಡೆದುಕೊಳ್ಳಬೇಕು. ಸಂಘವು ವಾರ್ಷಿಕವಾಗಿ 1,70,000 ರೂ. ನಿವ್ವಳ ಲಾಭ ಪಡೆಯುವ ಮೂಲಕ ಪ್ರಗತಿಯಲ್ಲಿ ಮುಂದೆ ಸಾಗುತಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಎಲ್ಲರೂ ಸಹಕಾರ ನೀಡಬೇಕು ಎಂದರು. ಸಂಘದ ಉಪಾಧ್ಯಕ್ಷ ಎನ್.ಎಂ.ಶಿವಪ್ರಸಾದ್, ನಿರ್ದೇಶಕರಾದ ಸೋಮಯ್ಯ, ಕುಮಾರ್, ಮಧು ಸೇರಿದಂತೆ ಇತರರಿದ್ದರು.