25 ಹೆಕ್ಟೇರ್ ನೆಡತೋಪು ಬೆಳೆಸಿದ ತೃಪ್ತಿಯಿದೆ

29 nrp 2
Published on

ಎನ್.ಆರ್.ಪುರ: ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿಯಾಗಿ 16ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಸಂಜೀವ ದೇವಾಡಿಗ ಅವರು 25 ಹೆಕ್ಟೇರ್‌ಗಿಂತಲೂ ಹೆಚ್ಚು ನೆಡತೋಪು ಬೆಳೆಸಿದ್ದಾರೆ ಎಂದು ಮಲ್ಲಂದೂರು ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಂ.ಎನ್.ಶಂಕರನಾರಾಯಣ ತಿಳಿಸಿದರು.

ತಾಲೂಕಿನ ಮಲ್ಲಂದೂರಿನ ಹೊನ್ನಮ್ಮೇಶ್ವರಿ ದೇವಸ್ಥಾನದಲ್ಲಿ ಮಲ್ಲಂದರಿನ ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಮಸ್ಥರಿಂದ ವರ್ಗಾವಣೆಗೊಂಡ ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ಸಂಜೀವ್ ದೇವಾಡಿಗ ಹಾಗೂ ವನಪಾಲಕ ರವಿಕುಮಾರ್‌ಗೆ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, ಸಂಜೀವ್ ದೇವಾಡಿಗ ಅವರು ಕಾಡಿಗೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಿದ್ದರು. ಇಲಾಖೆಯ ಕಾನೂನು ಪಾಲಿಸುವ ಜತೆಗೆ ಗ್ರಾಮಸ್ಥರ ಜತೆ ಮಾನವೀಯತೆಯಿಂದಲೂ ನಡೆದುಕೊಂಡಿದ್ದರು ಎಂದರು.

ಉಪ ವಲಯ ಅರಣ್ಯಾಧಿಕಾರಿ ಸಂಜೀವ ದೇವಾಡಿಗ ಮಾತನಾಡಿ, ನನ್ನ ಸೇವಾವಧಿಯಲ್ಲಿ ಗ್ರಾಮಸ್ಥರು ಸಹಕಾರ ನೀಡಿರುವುದು ಅನನ್ಯವಾಗಿದೆ. ಸಿಕ್ಕ ಅವಕಾಶದಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net