ನೆಲಮಂಗಲ ನಗರಕ್ಕೆ 25ಕೋಟಿ ರೂಪಾಯಿ ಅನುದಾನ

17 04 2025_BGR RURAL_PAGE_2
ಬಸವನಹಳ್ಳಿ ಬಳಿಯ ಸಾಯಿರಾಮ್​ ಬಡಾವಣೆಯಲ್ಲಿ ಪ್ರಯಾಣಿಕರ ತಂಗುದಾಣ ಕಾಮಗಾರಿಗೆ ಸಂಸದ ಡಾ.ಕೆ.ಸುಧಾಕರ್​ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಎಂ.ವಿ.ನಾಗರಾಜು, ಮುಖಂಡ ಸಪ್ತಗಿರಿಶಂಕರ್​ನಾಯಕ್​, ಬಿಜೆಪಿ ಗ್ರಾಮಾಂತರ ಜಿಲ್ಲಾದ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಟಕ ಅಧ್ಯೆ ಮಂಜುಳಾಸುರೇಶ್​ ಇತರರು ಇದ್ದರು.
Published on

ನೆಲಮಂಗಲ: ಕೇಂದ್ರ ಸರ್ಕಾರದ ಅಮೃತ್​ ಯೋಜನೆಯಡಿ ನೆಲಮಂಗಲ ನಗರ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್​ ತಿಳಿಸಿದರು.

ಬಸವನಹಳ್ಳಿ ಬಳಿಯ ಸಾಯಿರಾಮ್​ ಬಡಾವಣೆಯಲ್ಲಿ ಪ್ರಯಾಣಿಕರ ತಂಗುದಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರ ಬರುತ್ತವೆ. ಪ್ರತಿ ವರ್ಷ ಸಂಸದರಿಗೆ ಕೇಂದ್ರದಿಂದ 5 ಕೋಟಿ ರೂಪಾಯಿ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನ ಬರಲಿದ್ದು, ಪ್ರತಿ ವರ್ಷವೂ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ವಿಧಾನಸಭಾ ಕ್ಷೇತ್ರದ 360 ಜನವಸತಿ ಪ್ರದೇಶಕ್ಕೆ ಸುಮಾರು 267 ಕೋಟಿ ರೂ. ವೆಚ್ಚದಲ್ಲಿ 311 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ಕಳೆದ ಹಾಗೂ ಪ್ರಸ್ತುತ ಅರ್ಥಿಕ ವರ್ಷದಲ್ಲಿ ನೆಲಮಂಗಲ ಕ್ಷೇತ್ರಕ್ಕೆ ಸುಮಾರು 147.67 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪ್ರಗತಿ ಪಥದಲ್ಲಿ ರಸ್ತೆ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ಸುಮಾರು 37.61 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ನಗರದ ಅರಿಶಿಣಕುಂಟೆ ಪ್ರಯಾಣಿಕರ ತಂಗುದಾಣ ಕಾಮಗಾರಿಗೂ ಚಾಲನೆ ನೀಡಲಾಯಿತು. ಬಳಿಕ ಅರಿಶಿಣಕುಂಟೆ ಬಳಿ ಶ್ರೀವಿನಾಯಕ ಸ್ವಾಮಿ ದೇವಾಲಯಕ್ಕೆ ಸಂಸದರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೇಶ್​, ನಗರಸಭೆ ಸದಸ್ಯ ಶಿವಕುಮಾರ್​, ಅಂಜಿನಪ್ಪ, ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ಕೃಪಾನಂದ್​, ಮುನಿರಾಜು, ಗ್ರಾಮಪಂಚಾಯಿತಿ ಸದಸ್ಯ ಅಶ್ವತ್ಥ್​, ಮುಖಂಡ ಉಮೇಶ್​, ಮಂಜುನಾಥ್​, ರಾಜಮ್ಮಪ್ರಕಾಶ್​, ವೇದಾವತಿ, ನೀಲಮ್ಮ, ಸುಮಾ ಉಪಸ್ಥಿತರಿದ್ದರು.

ಹೆಚ್ಚಿದ ಭ್ರಷ್ಟಾಚಾರ : ಕಾಂಗ್ರೆಸ್​ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಕಣ್ಣು , ಕಿವಿ ಹಾಗೂ ಹೃದಯ ಇಲ್ಲ. ರೈತರು ಹಾಗೂ ಜನಸಾಮಾನ್ಯರು ತೊಂದರೆ ಅನುಭವಿಸುತ್ತಾರೆ. ಕಾಂಗ್ರೆಸ್​ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಡಾ.ಕೆ.ಸುಧಾಕರ್​ ವಾಗ್ದಾಳಿ ನಡೆಸಿದರು.

ಶಿಷ್ಟಾಚಾರ ಉಲ್ಲಂನೆ ಆರೋಪ : ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಸದರಿಗೆ ಆಹ್ವಾನ ನೀಡದೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಬಾರದು. ಶಿಷ್ಟಾಚಾರ ಉಲ್ಲಂನೆ ಕುರಿತು ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಸಂಸದರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net