ಅಡಕೆ ರೈತರಿಗಾಗಿ 25 ಕೋಟಿ ರೂ. ಮೀಸಲಿಡಿ

Areca nut
Published on

ತೀರ್ಥಹಳ್ಳಿ: ಎಲೆಚುಕ್ಕೆ ಮತ್ತು ಹಳದಿ ಎಲೆರೋಗ ಮುಂತಾದ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಕೆ ಬೆಳೆಗಾರರಿಗೆ ಪರಿಹಾರ ನೀಡಲು ಆಯವ್ಯಯದಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಡುವಂತೆ ಶಾಸಕ ಆರಗ ಜ್ಞಾನೇಂದ್ರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಬೆಳೆಯಾಗಿರುವ ಅಡಕೆ ರೋಗ ಪೀಡಿತವಾಗಿದ್ದು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಹಲವಾರು ವರ್ಷಗಳಿಂದ ಅಡಕೆ ರೋಗ ಬಾಧೆಯಿಂದ ನಲುಗುತ್ತಿದ್ದರೂ ಸೂಕ್ತ ಔಷಽಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಾಡಿರುವ ಸಾಲವನ್ನು ತೀರಿಸಲು ರೈತರು ಅಸಮರ್ಥರಾಗಿದ್ದಾರೆ. ಮೇಲ್ಕಂಡ ರೋಗದ ಬಗ್ಗೆ ಸಂಶೋಧನೆ ನಡೆಸಲು ಹಾಗೂ ತೋಟ ಕಳೆದುಕೊಂಡಿರುವ ನಿರ್ಗತಿಕ ರೈತರಿಗೆ ಪರಿಹಾರ ನೀಡಲು ಒಂದು ನಿಽಯನ್ನು ಸ್ಥಾಪಿಸಿ ಇದೇ ಆಯವ್ಯಯದಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಟ್ಟು ರೈತರ ಸಹಾಯಕ್ಕೆ ಬರಬೇಕು ಎಂದು ಮುಖ್ಯಮಂತ್ರಿಗಳಿಗೆ ಮಂಗಳವಾರ ಬರೆದಿರುವ ಪತ್ರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net