

ಬಡತನ ರೇಖೆಯಿಂದ ೨೫ ಕೋಟಿ ಜನ ಹೊರಕ್ಕೆ
ವಿಜಯವಾಣಿ ಸುದ್ದಿಜಾಲ ಬೀದರ್
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. ನರೇಂದ್ರ ಮೋದಿ ಆಡಳಿತದ ಹತ್ತು ವರ್ಷದಲ್ಲಿ ದೇಶದ ೨೫ ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸಚಿವ, ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೇಳಿದರು.
ಜನರ ಕಲ್ಯಾಣಕ್ಕಾಗಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುದ್ರಾ, ಜನಧನ, ವಿಶ್ವಕರ್ಮ, ಆಯುಷ್ಮಾನ್ ಭಾರತ ಸೇರಿ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳ ಸದುಪಯೋಗ ಪಡೆದ ೨೫ ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಅವರಿಗೆ ಇಂದಿಗೂ ಸರ್ಕಾರದ ಸೌಲಭ್ಯಗಳನ್ನು ಮುಂದುವರಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೋದಿ ಸರ್ಕಾರದಲ್ಲಿ ಹತ್ತು ಹಲವು ಸಾಮಾಜಿಕ ಸುರP್ಷÀತೆ ಯೋಜನೆ, ಮೂಲಸೌಕರ್ಯಗಳನ್ನು ಎಲ್ಲ ಕ್ಷೇತ್ರ, ವರ್ಗಗಳಿಗೆ ನೀಡಿದ್ದ ಪರಿಣಾಮ ಜನರ ಜೀವನದಲ್ಲಿ ಬದಲಾವಣೆ ಕಾಣುತ್ತಿz್ದೆÃವೆ. ಯೋಜನೆ ರೂಪಿಸುವ ಜತೆಗೆ ಪಾರದರ್ಶಕ, ಭ್ರಷ್ಟಾಚಾರರಹಿತ ಅನುಷ್ಠಾನ ಮಾಡಲಾಗಿದೆ. ಯಾವುದೇ ಕಾಮಗಾರಿ ಶಿಲಾನ್ಯಾಸ ಮಾಡಿದ ಎರಡು ವರ್ಷಗಳಲ್ಲಿ ಮೋದಿ ಲೋಕಾರ್ಪಣೆ ಸಂಕಲ್ಪ ಮಾಡಿದ್ದರು. ಈ ರೀತಿ ಯಾವ ಪ್ರಧಾನಿ ಕಾಲದಲ್ಲೂ ಇರಲಿಲ್ಲ ಎಂದರು.
ಪ್ರಧಾನಮAತ್ರಿ ಮುದ್ರಾ ಯೋಜನೆಯಡಿ ೧೦ ವರ್ಷದಲ್ಲಿ ೪೬ ಕೋಟಿ ಜನರಿಗೆ ಲಾಭವಾಗಿದೆ. ೨೭ ಲP್ಷÀ ಕೋಟಿ ರೂ. ಈ ಒಂದು ಯೋಜನೆಯಲ್ಲಿ ಕೇಂದ್ರ ನೀಡಿದೆ. ಮುದ್ರಾದಡಿ ೪೬ ಕೋಟಿ ಸೇರಿ ೫೪ ಕೋಟಿ ಜನರಿಗೆ ವಿವಿಧ ಯೋಜನೆಗಳಡಿ ಉದ್ಯೋಗ ನೀಡಲಾಗಿದೆ. ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡಲಾಗಿದೆ. ಭಾರತದಲ್ಲಿ ಉತ್ಪನ್ನ ಮಾಡಿದ ೭೭೫ ಬಿಲಿಯನ್ ಡಾಲರ್ ವಸ್ತುಗಳನ್ನು ರÀÄ್ತ ಮಾಡಲಾಗಿದೆ ಎಂದು ಹೇಳಿದರು.
ಜನಧನ ಖಾತೆ ತೆಗೆದಾಗ ಕಾಂಗ್ರೆಸಿಗರು ಟೀಕೆ ಮಾಡಿದ್ದರು. ಹತ್ತು ವರ್ಷದಲ್ಲಿ ೫೦ ಕೋಟಿ ಜನ ಈ ಖಾತೆ ಹೊಂದಿದ್ದು, ೨.೦೫ ಲP್ಷÀ ಕೋಟಿ ರೂ. ಬಡವರು ಠೇವಣಿ ಇಟ್ಟಿದ್ದಾರೆ. ೨೦೧೪ಕ್ಕೂ ಮುನ್ನ ಶೇ.೫೫ ಮಾತ್ರ ರಸ್ತೆ ಸಂಪರ್ಕ ಇತ್ತು. ಮೋದಿ ಆಡಳಿತದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಶೇ.೯೯ ಹಳ್ಳಿಗಳಿಗೆ ಸಂಪರ್ಕ ರಸ್ತೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ೮೦ ಲP್ಷÀ ಮನೆ ಮಾತ್ರ ನೀಡಿದ್ದರು. ಆದರೆ ಮೋದಿ ಅವಧಿಯಲ್ಲಿ ನಾಲ್ಕು ಕೋಟಿ ಮನೆ (ವರ್ಷಕ್ಕೆ ೪೦ ಲP್ಷÀ) ನೀಡಲಾಗಿದೆ. ೧೦.೫ ಕೋಟಿ ಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್, ಜೆಜೆಎಂ ಅಡಿ ೧೪ ಕೋಟಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ೧೨ ಕೋಟಿ ಮನೆಗಳಲ್ಲಿ ಶೌಚಗೃಹ ನಿರ್ಮಾಣ, ಕೌಶಲ ಯೋಜನೆಯಡಿ ಎರಡು ಕೋಟಿ ಯುವಕರಿಗೆ ತರಬೇತಿ ನೀಡಿ ನೌಕರಿ ಕೊಡಿಸಲಾಗಿದೆ ಎಂದು ವಿವರಿಸಿದರು.
ದೇಶದಲ್ಲಿ ಶೇ.೮೨ ಭಯೋತ್ಪಾದನೆ ಕಡಿಮೆಯಾಗಿದೆ. ಆಯುಷ್ಮಾನ್ ಭಾರತದಡಿ ೫೫ ಕೋಟಿ ಜನರಿಗೆ ಕಾರ್ಡ್ ವಿತರಿಸಲಾಗಿದೆ. ಹೀಗೆ ಮೋದಿ ಅವಧಿಯಲ್ಲಿ ಹಲವು ಯೋಜನೆಗಳು ಪೂರ್ಣಪ್ರಮಾಣದಲ್ಲಿ ಗುರಿ ಮುಟ್ಟಿವೆ. ಮತ್ತೆ ದೇಶಕ್ಕೆ ಮೋದಿ ಬೇಕಿದ್ದರಿಂದ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯP್ಷÀ ಸೋಮನಾಥ ಪಾಟೀಲ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ್, ಶಶಿಧರ ಹೊಸಳ್ಳಿ, ಬಸವರಾಜ ಪವಾರ್ ಇದ್ದರು.