ಆಕ್ಸಿಜನ್ ಸಹಿತ 25 ಬೆಡ್ : ಕೋವಿಡ್ ಎದುರಿಸಲು ಹೆಬ್ರಿ ತಾಲೂಕಲ್ಲಿ ಸನ್ನದ್ಧ ಸ್ಥಿತಿ

hbr hospital web
Published on

ನರೇಂದ್ರ ಎಸ್.ಮರ್ಸಣಿಗೆ ಹೆಬ್ರಿ

ರಾಜ್ಯಾದ್ಯಂತ ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಮಧ್ಯೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಕೋವಿಡ್ -19 ತುರ್ತು ಚಿಕಿತ್ಸೆಗೆ ಸನ್ನದ್ಧ ಸ್ಥಿತಿಗೆ ಸಿದ್ಧವಾಗಬೇಕಿದೆ. ಜಿಲ್ಲಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ತುಂಬಿ ಜನರಲ್ಲಿ ಭಯದ ವಾತಾವರಣವಿದ್ದು, ಹೆಬ್ರಿಯಲ್ಲಿ ಪರಿಸ್ಥಿತಿ ಎದುರಿಸಲು ತಯಾರಿ ನಡೆಯುತ್ತಿದೆ.

ಕಳೆದ ವಾರ ಶಾಸಕ ವಿ.ಸುನೀಲ್ ಕುಮಾರ್ ಹೆಬ್ರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ -19 ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಪ್ರಸ್ತುತ ಇಲ್ಲಿ ಆಕ್ಸಿಜನ್ ಸೌಲಭ್ಯದೊಂದಿಗೆ 18 ಬೆಡ್‌ಗಳ ವ್ಯವಸ್ಥೆ ಇದ್ದು, ಹೆಚ್ಚುವರಿ ಏಳು ಬೆಡ್‌ಗಳ ವ್ಯವಸ್ಥೆ ಈ ವಾರದ ಅಂತ್ಯದಲ್ಲಿ ಕಲ್ಪಿಸಲಾಗುವುದು. ಇದರಿಂದ ಇಲ್ಲಿ ಒಟ್ಟು 25 ಆಕ್ಸಿಜನ್ ಸಹಿತ ಬೆಡ್‌ಗಳ ನಿರ್ಮಾಣ ಆಗಲಿದೆ.

ಈ ಮಧ್ಯೆ ಗ್ರಾಮೀಣ ಪ್ರದೇಶಗಳ ನಾಡ್ಪಲ್ ಮತ್ತು ಕಬ್ಬಿನಾಲೆಗೆ ಸಂಬಂಧಿಸಿ ಸೋಂಕಿತರನ್ನು ಕರೆತರಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೆಬ್ರಿ ಪರಿಸರದ ಸುತ್ತಮುತ್ತ ಅನೇಕ ರೋಗಿಗಳ ತಪಾಸಣೆಗಾಗಿ ತುರ್ತು ಸಾರಿಗೆ ವ್ಯವಸ್ಥೆಯನ್ನು ಆಟೋ ಸವಾರರೇ ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಪಟ್ಟಿದ್ದಾರೆ.

ಹೆಬ್ರಿಯಲ್ಲಿ ಕರೊನಾ ಚಿಕಿತ್ಸೆ ಕೇಂದ್ರ: ಹೆಬ್ರಿ ಭಾಗದ ಜನ ಕೋವಿಡ್ ಚಿಕಿತ್ಸೆಗಾಗಿ ಕಾರ್ಕಳ, ಉಡುಪಿ ಅಥವಾ ಕುಂದಾಪುರ ಭಾಗಕ್ಕೆ ತೆರಳಬೇಕು. ಅಲ್ಲಿ ಬೆಡ್, ಐಸಿಯು ಇವೆಲ್ಲವನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪ್ರಸಕ್ತ ಉಡುಪಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುವ ಬಗ್ಗೆ ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿರುವುದರಿಂದ ಹೆಬ್ರಿಯಲ್ಲಿ ಸೂಕ್ತ ವ್ಯವಸ್ಥೆ ಈಗಿನಿಂದಲೇ ಆಗಬೇಕಿದೆ.

ಹೆಬ್ರಿಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರದ ಅಗತ್ಯದ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಒಂದು ವಾರದೊಳಗೆ ಆಕ್ಸಿಜನ್ ಸಹಿತ 25 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಜನ ಯಾರೂ ಆತಂಕಪಡಬಾರದು.ಡಾ.ಸಂತೋಷ್ ಕುಮಾರ್ಆಡಳಿತ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿಸಿಬ್ಬಂದಿ ಶಕ್ತಿ ಮೀರಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಹೆಬ್ರಿಗೆ ವಾರಾಂತ್ಯದಲ್ಲಿ ಕೋವಿಡ್ ಕೇರ್ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು. ಸಾರ್ವಜನಿಕರು ಇದರ ಬಗ್ಗೆ ಭಯಪಡಬೇಕಾಗಿಲ್ಲ.ವಿ.ಸುನೀಲ್ ಕುಮಾರ್ ಶಾಸಕರುಚಾಮರಾಜನಗರದಲ್ಲಿ ನಡೆದ ಘಟನೆ ಎಲ್ಲಿಯೂ ಮರುಕಳಿಸದಿರಲಿ. ಹೆಬ್ರಿ ಗ್ರಾಮೀಣ ಪ್ರದೇಶವಾಗಿದ್ದರಿಂದ ಸಮುದಾಯ ಆರೋಗ್ಯ ಕೇಂದ್ರ ಪೂರ್ವ ಸಿದ್ಧತೆ ಮಾಡಿಕೊಂಡು ಸಮಸ್ಯೆಯನ್ನು ಎದುರಿಸುವಂತಾಗಬೇಕು.ಶ್ರೀಕಾಂತ್ ಕುಚ್ಚೂರು ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net