24ರಿಂದ ಅತಿರುದ್ರಯಾಗ ಆರಂಭ

11ydg01
Published on

ಯಾದಗಿರಿ: ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಮಠದ ಆವರಣದಲ್ಲಿ ಮಾ.24ರಿಂದ 31ರ ವರೆಗೆ ನಡೆಯಲಿರುವ ಅತಿರುದ್ರಯಾಗಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಕಾಶಿ ಘನಪಂಡಿತ ಶ್ರೀ ವಿಶ್ವಾರಾಧ್ಯರ ಮೂತರ್ಿ ಪ್ರತಿಷ್ಠಾಪನೆಯ ಅಂಗವಾಗಿ ಅಬ್ಬೆತುಮಕೂರಿನಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಭವ್ಯವಾದ ಧಾಮರ್ಿಕ ಕಾರ್ಯಕ್ರಮಗಳನ್ನು ಪರಂಪರಾನುಗತವಾಗಿ ನೆರೆವೇರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.

108 ಗೋಮಂಗಲ ಪೂಜೆ, ಅಷ್ಟ ಮಂಗಲ, ಲಕ್ಷ್ಮೀ ಕುಬೇರ ಪೂಜೆ ಮುಂತಾದ ಹಲವು ಧಾಮರ್ಿಕ ಕಾರ್ಯಕ್ರಮಗಳ ಜತೆಗೆ 2013ರಲ್ಲಿ ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜಾ ಸ್ಮರಣಾರ್ಥವಾಗಿ 41 ಅಡಿ ಎತ್ತರದ ಮಂದಿರ ಮತ್ತು ಶ್ರೀವಿಶ್ವಾರಾಧ್ಯರ ಮೂತರ್ಿ ಪ್ರತಿಷ್ಠಾಪನೆಯ ಲೋಕಾರ್ಪಣೆ ಮತ್ತು ತನಿಮಿತ್ತ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬುವ ಹತ್ತು ಹಲವಾರು ಧಾಮರ್ಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಬ್ಬೆತುಮಕೂರು ಸಜ್ಜುಗೊಳ್ಳುತ್ತಿದೆ.

ಅತಿರುದ್ರಯಾಗ ಮಂಟಪವನ್ನು ಬಳ್ಳಾರಿ ಮತ್ತು ಮೈಸೂರಿನಿಂದ ಆಗಮಿಸಿದ ಅನೇಕ ಕಾರ್ಯಕರ್ತರು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದಾರೆ. ನಿರಂತರ ಒಂದು ವಾರ ನಡೆಯುವ ಕಾರ್ಯಕ್ರಮಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಅನೇಕ ಸೇವಾಧಾರಿಗಳು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಠದ ಪೀಠಾಪತಿ ಡಾ.ಗಂಗಾಧರ ಸ್ವಾಮಿಗಳು ಖುದ್ದಾಗಿ ವೀಕ್ಷಿಸಿ, ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net