

ಕಲಬುರಗಿ: ಮೇ ೫ರಂದು ರಾತ್ರಿ ನಡೆದ ಕೊಲೆ ಪ್ರಕರಣದ ಆರು ಆರೋಪಿಗಳನ್ನು ೨೪ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯೊಂದರಲ್ಲಿ ಆರೋಪಿಯಾಗಿರುವ ನಜಮೋದ್ದೀನ್ನ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ರ‍್ಬರವಾಗಿ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಕುರಿತು ರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆರು ಆರೋಪಿಗಳನ್ನು ಕೃತ್ಯ ನಡೆದ ೨೪ಗಂಟೆಯಲ್ಲಿ ಬಂಧಿಸಿದ್ದು, ಇನ್ನುಳಿತ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಎಎಸ್ಪಿ ಡಿ.ಜಿರಾಜಣ್ಣ ನೇತೃತ್ವದಲ್ಲಿ ಪಿಐ ಮಲ್ಲಿಕರ‍್ಜುನ ಇಕ್ಕಳಕಿ, ಪಿಎಸ್ಐ ಸುರೇಶ ಮಲಘಾಣ, ಎಎಸ್ಐ ಅಶೋಕ, ಸಿಬ್ಬಂದಿ ಗಡ್ಡೆಪ್ಪ ಕೊರೆ, ಸಾಜೀದ್, ಲಕ್ಷಿ$್ಮಕಾಂತ, ಆನಂದ, ಮೆಹೆಬೂಬ್, ಲಿಂಗರಾಜ, ಶಾಂತಮ್ಮ, ಮಂಜುನಾಥ ಅವರ ತಂಡ ತನಿಖೆ ನಡೆಸಿ, ಆರು ಜನರನ್ನು ಬಂಧಿಸಿದ್ದಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.