24 ರಿಂದ ಲಚ್ಯಾಣದಲ್ಲಿ ಪುಣ್ಯಾರಾಧನೆ

24th to Punyaradhana at Lachana
ಲಿಂ.ಸಿದ್ಧಲಿಂಗ ಶ್ರೀಗಳು
Published on

ಇಂಡಿ: ತಾಲೂಕಿನ ಸುೇತ್ರ ಲಚ್ಯಾಣದಲ್ಲಿ ಸದ್ಗುರು ಸಿದ್ಧಲಿಂಗ ಮಹಾರಾಜರ 97ನೇ ಪುಣ್ಯಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮ ಸೆಪ್ಟೆಂಬರ್​ 24 ಹಾಗೂ 25 ರಂದು ಆಯೋಜಿಸಲಾಗಿದೆ.

24 ರಂದು ಬೆಳಗ್ಗೆ 5 ಗಂಟೆಗೆ ಮಠದಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಲಿಂ.ಶಂಕರಲಿಂಗ ಮಹಾಶಿವಯೋಗಿಗಳು, ಅರ ದಾಸೋಹಿ ಸಂಗನಬಸವ ಮಹಾಶಿವಯೋಗಿಗಳು ಹಾಗೂ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಭಕ್ತರಿಂದ ವಿಶೇಷ ಪೂಜೆ ನಡೆಯಲಿದೆ.
ಸಂಜೆ 6.30 ಗಂಟೆಗೆ ಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ಜರುಗಲಿದೆ. ಬಂಥನಾಳದ ಡಾ.ವೃಷಭಲಿಂಗ ಮಹಾಸ್ವಾಮೀಜಿ, ಮುಗಳಖೋಡದ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ, ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಹಾಗೂ ಜಕನೂರಿನ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಭಾಗವಹಿಸಲಿದ್ದಾರೆ.

ರಾತ್ರಿ 8 ಗಂಟೆಗೆ ಮಣೆ ಏರುವ ಕಾರ್ಯಕ್ರಮದೊಂದಿಗೆ ಮಠದ ಆವರಣದ ತುಂಬ ಇಡೀ ರಾತ್ರಿ ನಾಡಿನ ವಿವಿಧ ಭಾಗದ ಹತ್ತು ಹಲವು ಭಜನಾ ಕಲಾತಂಡಗಳಿಂದ ಏಕಕಾಲಕ್ಕೆ ಸಾಮೂಹಿಕ ಭಜನೆ ಬೆಳಗಿನ ಜಾವದವರೆಗೆ ನಡೆಯಲಿದೆ.

25 ರಂದು ಬೆಳಗ್ಗೆ 5 ಗಂಟೆಗೆ ಲಿಂ. ಶಂಕರಲಿಂಗ ಮಹಾಶಿವಯೋಗಿಗಳು ಹಾಗೂ ಸಿದ್ಧಲಿಂಗ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ ಅಭಿಷೇಕ ಜರುಗಲಿದೆ. 10 ಗಂಟೆಗೆ ಬಂಥನಾಳದ ಡಾ.ವೃಷಭಲಿಂಗ ಮಹಾಶಿವಯೋಗಿಗಳ ಪೂಜ್ಯಪಿಠದ ಪಾದಪೂಜಾ ಕಾರ್ಯಕ್ರಮ ಸೋಲಾಪುರದ ಸಿದ್ರಾಮಪ್ಪ ಕರಜಗಿಕರ ದಂಪತಿಯಿಂದ ನೆರವೇರಲಿದೆ. ಬಳಿಕ ಇಲ್ಲಿನ ಅನ್ನ ದಾಸೋಹದಲ್ಲಿ ಮಹಾಪ್ರಸಾದ ಸೇವೆ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net