ಇಂದಿನಿಂದ ೨೪ನೇ ರಾಜ್ಯ ಸಮ್ಮೇಳನ

WhatsApp Image 2022-09-24 at 1.26.38 PM
Published on

ಮಡಿಕೇರಿ: ಭಾರತ ಕಮ್ಯೂನಿಸ್ಟ್ ಪಕ್ಷದ ೨೪ನೇ ರಾಜ್ಯ ಸಮ್ಮೇಳನ ಸೆ೨೫ರಿಂದ ೨೭ರವರೆಗೆ ಹಾಸನ ಜಿಲ್ಲೆಯಲ್ಲಿ ನಡೆಯಲಿದ್ದು, ಕೊಡಗಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಪಕ್ಷದ ಸಹ ಕಾರ್ಯದರ್ಶಿ ಎಚ್.ಎಂ ಸೋಮಪ್ಪ ಮನವಿ ಮಾಡಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಕಮ್ಯೂನಿಸ್ಟ್ ಪಕ್ಷದ ೨೪ನೇ ಮಹಾಧಿವೇಶನ ಆಂದ್ರಪ್ರದೇಶದ ವಿಜಯವಾಡ ನಗರದಲ್ಲಿ ಅ೧೪ ರಿಂದ ೧೮ರವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯದ ೨೪ನೇ ಸಮ್ಮೇಳನ ಹಾಸನದಲ್ಲಿ ನಡೆಯಲಿದೆ. ಸೆ೨೫ರಂದು ಧ್ವಜಾರೋಹಣ ನೆರವೇರಿಸಿ ೩ ದಿನಗಳ ಕಾಲ ಪ್ರತಿನಿಧಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದ ಪ್ರಯುಕ್ತ ಸೆ೨೭ರಂದು ಅವರ ತ್ಯಾಗ ಬಲಿದಾನಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಸಂಕಲ್ಪದೊಂದಿಗೆ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಪಕ್ಷದ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಶಬಾನ, ಸದಸ್ಯೆ ಲಕ್ಷ್ಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net