1 ರಂದು 24*7 ಕುಡಿಯುವ ನೀರಿನ ಯೋಜನೆಗೆ ಚಾಲನೆ

tlk 27-1 pressmeet
ತಾಳಿಕೋಟೆ ಪಟ್ಟಣದ ಪುರಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಇಇ ಬಸವರಾಜ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜುಬೇದಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಸದಸ್ಯರಾದ ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ ಇತರರಿದ್ದರು.
Published on

ತಾಳಿಕೋಟೆ: ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ನಿರಂತ ನೀರು ಪೂರೈಸುವ ವಿತರಣಾ ವ್ಯವಸ್ಥೆ ಕಾಮಗಾರಿಗೆ ಫೆ.1 ರಂದು ಚಾಲನೆ ನೀಡಲಾಗುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಸರ್ಕಾರ, ವಿಜಯಪುರ ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ತಾಳಿಕೋಟೆ ಪುರಸಭೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಭೂಮಿಪೂಜೆ ನೆರವೇರಿಸುವರು. ನಗರಾಭಿವೃದ್ಧಿ ಮತ್ತು ನಗರ ಯೋಜನೆ ಒಳಚರಂಡಿ ಮಂಡಳಿ ಸಚಿವ ಭೈರತಿ ಸುರೇಶ ಉಪಸ್ಥಿತರಿರುವರು. ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅಧ್ಯಕ್ಷತೆ ವಹಿಸುವರು. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಧಾರವಾಡ ವಿಧಾನಸಭಾ ಶಾಸಕ ವಿನಯ ಕುಲಕರ್ಣಿ, ವಿಜಯಪುರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ, ಸಂಸದರಾದ ಡಾ. ಸುಧಾ ಮೂರ್ತಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್. ಪೂಜಾರಿ, ರವಿಕುಮಾರ ಎನ್., ಕೇಶವಪ್ರಸಾದ ಎಸ್., ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನಬಾಶಾ ಜಮಾದಾರ, ಸರ್ಕಾರದ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್, ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್, ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸೆಲ್ವಮಣಿ ಆರ್., ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಎಸಪ್ ಲಕ್ಷ್ಮಣ ನಿಂಬರಗಿ ಮತ್ತಿರರು ಆಗಮಿಸುವರೆಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಜುಬೇದಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಸದಸ್ಯರಾದ ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ, ಡಿ.ವಿ. ಪಾಟೀಲ, ಯಾಸೀನ್ ಮಮದಾಪೂರ, ಮುಸ್ತಾ ಚೌದ್ರಿ, ಅಕ್ಕಮಹಾದೇವಿ ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ಮುಖ್ಯಾಧಿಕಾರಿ ಮೋಹನ್ ಜಾಧವ, ಅಧಿಕಾರಿ ಮುತ್ತು, ಗುತ್ತಿಗೆದಾರ ಸುನೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net