

ಚಿತ್ರದುರ್ಗ:ಮಕ್ಕಳಲ್ಲಿ ನಾಡು-ನುಡಿ ಪ್ರೇಮ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನಿಂದ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಕರ್ನಾಟಕ ಎಲ್ಲ ಆಯಾಮಗಳಲ್ಲೂ ಸುಂದರ, ಸಂಪದ್ಭರಿತ ರಾಜ್ಯವಾಗಿದೆ. ವಿಭಿನ್ನ ಭಾಷೆ, ಧರ್ಮ, ಜಾತಿ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ಈ ಕಾಲೇಜಿನಲ್ಲಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳು ಕನ್ನಡ ಕಲಿಯಬೇಕು. ಕನ್ನಡವನ್ನು ಉಳಿಸಿ, ಬೆಳೆಸುವುದರ ಜತೆಗೆ ಭಾಷೆ ಬಳಕೆ ಅತೀ ಅವಶ್ಯವೆಂದರು. ಕಾಲೇಜಿನ ಬೋಧಕ ಸಿಬ್ಬಂದಿ ರಾಜ್ಯೋತ್ಸವದ ಮಹತ್ವದ ಸಂದೇಶ ಸಾರುವ ಕಿರುಚಿತ್ರವನ್ನು ಶ್ರೀಗಳು ಬಿಡುಗಡೆ ಮಾಡಿದರು.
ಲಾವಣಿಕಾರ ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಪದಗಳನ್ನು ಪ್ರಸ್ತುತ ಪಡಿಸಿದರು. ಪ್ರಾಚಾರ್ಯೆ ಡಾ.ಎಸ್.ವಿ. ಸವಿತಾ, ಕನ್ನಡ ಮಾತನಾಡಲು ಕೀಳರಿಮೆ ಬೇಡವೆಂದರು.
ಪ್ರಾಧ್ಯಾಪಕರಾದ ಎನ್. ಬಸವರಾಜ, ಎಂ.ಪವಿತ್ರಾ, ಎಸ್.ಮಹದೇಶ್ವರ್, ಬಿ.ಮಧು. ವೀರೇಶ್, ಮೋನಿಕಾ, ಯಶಸ್ವಿನಿ, ಸುಮಿತ್ರಾ, ಆಕಾಶ್, ಮೌನೇಶ್, ದಿವ್ಯಾ, ನಯನ, ಸುಮಯ, ಕುಸುಮ, ಬೋಧಕೇತರ ಸಿಬ್ಬಂದಿ ಲಿಂಗರಾಜು, ಕೀರ್ತಿಕುಮಾರ್, ಅಭಿಷೇಕ್, ಬಸವರಾಜ, ಚಂದನಾ, ವಿವೇಕಾನಂದ, ನಾಗೇಂದ್ರಪ್ಪ, ಶ್ರುತಿ, ಕಾರ್ತಿಕ್ ಇದ್ದರು.