

ಹಾಸನ: ಸಕಲೇಶಪುರ: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ವಾಹನ ಸಮೇತ ನಾಲ್ವರನ್ನು ನಗರಠಾಣೆ ಪೊಲೀಸರು ಬಂದಿಸಿದ್ದಾರೆ.
ನ.10 ರಂದು ಮಧ್ಯ ರಾತ್ರಿ 1 ಗಂಟೆಯಲ್ಲಿ ಸಕಲೇಶಪುರ ಬೈಪಾಸ್ ರಸ್ತೆಯ ಹೇಮಾವತಿ ನದಿಯ ಹೊಸ ಸೇತುವೆ ಹತ್ತಿರ ಮಾರುತಿ ವ್ಯಾನಿನಲ್ಲಿ ಪ್ಲಾಸಿಕ್ ಚೀಲಗಳಲ್ಲಿ ಮರಳನ್ನು ತುಂಬಿ ಸಾಗಾಣಿಕೆ ಮಾಡಿ ಮಾರಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ನಗರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ.ಎಂ.ಪಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸದರಿ ವ್ಯಾನಿನಲ್ಲಿ ಮರಳು ತುಂಬುರುವುದು ಖಚಿತವಾಗಿತ್ತು. ಕೂಡಲೇ ವಾಹನ ತಡೆದು ಪರಿಶೀಲಿಸಿದಾಗ ಯಾವುದೇ ಅನುಮತಿ ಪಡೆಯದೇ ಇರುವುದು ಕಂಡು ಬಂದಿದೆ.
ಕೂಡಲೇ ಮಳಲಿ ಗ್ರಾಮದ ರವಿ ಅಲಿಯಾಸ್ ಚಾರ್ಲಿ, ಕುಶಾಲನಗರ ಬಡಾವಣೆಯ ಮಹೇಶ, ಬಾಳೆಗದ್ದೆಯ ಭರತ್ ಮತ್ತು ಆದಿತ್ಯ ಎಂಬುವರನ್ನು ಬಂಧಿಸಿದ್ದಾರೆ. ಮರಳು, ವಾಹನ ಸಮೇತ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.