

ಕಾಗವಾಡ: ಪ್ರಸಕ್ತ ಕಬ್ಬು ನುರಿಸುವ ಹಂಗಾಮ ಯಶಸ್ವಿಗೊಳಿಸಲು ರೈತರು ಹಾಗೂ ಸಿಬ್ಬಂದಿ ಸಹಕಾರ ಅಗತ್ಯವಾಗಿದೆ ಎಂದು ಅಥಣಿ ಶುಗರ್ಸ್ ಅಧ್ಯಕ್ಷ ಶ್ರೀಮಂತ ಪಾಟೀಲ ಹೇಳಿದರು.
ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ 24ನೇ ಬಾಯ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಾವು ಬೆಳೆದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ, ವ್ಯವಸ್ಥಾಪಕ ಆರ್.ಎ.ಲಟಕೆ, ನಿರ್ದೇಶಕ ಅಬ್ದುಲ್‌ಬಾರಿ ಮುಲ್ಲಾ, ಮುಖಂಡರಾದ ದಾದಾಗೌಡ ಪಾಟೀಲ, ಮೋಹನ ಮುತಾಲಿಕ, ಮುರುಗೆಪ್ಪ ಮಗದುಮ್, ಇಂದ್ರಜಿತ್ ಪಾಟೀಲ, ಸುನೀಲ ಪಾಟೀಲ, ಬಾಳು ಮಗದುಮ್, ದಿಲೀಪ ಪವಾರ, ರಾಜು ಚವ್ಹಾಣ, ಚಂದ್ರಕಾಂತ ಪಾಟೀಲ, ಸಂಭಾಜಿ ಸಾವಂತ ಇತರರಿದ್ದರು.