ಮುತ್ತಂಗಿಯಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ

21hbd4
ಚಿಟಗುಪ್ಪ ತಾಲೂಕಿನ ಮುತ್ತಂಗಿಯ ರಾಚೋಟೇಶ್ವರ ಮಂದಿರದಲ್ಲಿ ಚಿಟಗುಪ್ಪ ಹಿರೇಮಠದ ಶ್ರೀಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಶಿವಪುತ್ರ ಸಾದಾ, ಸುಭಾಷ ಪಲಾಟೆ, ಮಲ್ಲಿಕಾರ್ಜುನ ಪಾಟೀಲ್, ಜಗನಾಥ ಮಜಗೆ, ಗುರಯ್ಯ ಸ್ವಾಮಿ ಇತರರಿದ್ದರು.
Published on

ಚಿಟಗುಪ್: ಮುತ್ತಂಗಿ ಗ್ರಾಮದ ಶ್ರೀ ರಾಚೋಟೇಶ್ವರ ದೇವಸ್ಥಾನದಲ್ಲಿ ಸೋಮವಾರ ಮಂದಿರದ ಕಳಸಾರೋಹಣ, ನವಗ್ರಹ ಸ್ಥಾಪನೆ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಶ್ರದ್ಧಾ ಭಕ್ತಿಯ ಮಧ್ಯೆ ಅತ್ಯಂತ ಸಡಗರ ಸಂಭ್ರಮದ ನೆರವೇರಿತು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕಳಸರೋಹಣ ಹಾಗೂ ವಿವಿಧ ಕಾರ್ಮಿಕ ಕಾರ್ಯಕ್ರಮ ಜರಗಿದವು. ಆರಂಭದಲ್ಲಿ ಗ್ರಾಮದಲ್ಲಿ ನೂತನ ನವಗ್ರಹಗಳ ಕುಂಭ ಕಳಸದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಚಿಟಗುಪ್ಪ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವಕ್ಕೆ ಸಂಜೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಭಕ್ತರು ದೀಪ ಹಚ್ಚಿ ಸಂಭ್ರಮಿಸಿದರು. ಬೇಮಳಖೇಡ ಶ್ರೀ ಡಾ.ರಾಜಶೇಖರ ಗೋರ್ಟಾ ಶಿವಾಚಾರ್ಯರು, ಶ್ರೀ ಶಂಕರಲಿಂಗ ಮುತ್ಯಾ, ಹವಾ ಮಲ್ಲಿನಾಥ ಮಹಾರಾಜ, ಶ್ರೀ ಬಸವಲಿಂಗ ಅವಧೂತರು, ಹುಡಗಿ, ಹಲಬರ್ಗಾ ಸೇರಿ ವಿವಿಧ ಮಠಾಧೀಶರು, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಾಜಿ ಶಾಸಕ ಸುಭಾಷ ಕಲ್ಲೂರ, ಗ್ರಾಮದ ಪ್ರಮುಖರಾದ ಶಿವಪುತ್ರ ಸಾದಾ, ಸುಭಾಷ ಪಲಾಟೆ, ಮಲ್ಲಿಕಾರ್ಜುನ ಪಾಟೀಲ್, ಜಗನಾಥ ಮಜಗೆ, ಗುರಯ್ಯ ಸ್ವಾಮಿ, ಗಣ್ಯರು, ಭಕ್ತರು ಇದ್ದರು.

ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದಲ್ಲಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ. ಗ್ರಾಮದಲ್ಲಿ ಭಕ್ತರು ಧರ್ಮ ಕಾರ್ಯದಲ್ಲಿ ತೊಡಿಸಿಕೊಂಡಿರುವುದಕ್ಕೆ ಇಲ್ಲಿ ಭಕ್ತಿ, ಶ್ರದ್ಧೆಯಿಂದ ನಡೆಯುತ್ತಿರುವ ಮಂದಿರದ ಕಳಸರೋಹಣ, ಲಕ್ಷ ದೀಪೋತ್ಸವ ಕಾರ್ಯವೇ ಸಾಕ್ಷಿಯಾಗಿದೆ. ಎಲ್ಲರೂ ಸೇರಿ ಮಾಡುತ್ತಿರುವ ಈ ಕಾರ್ಯ ಸಂತಸ ಮೂಡಿಸಿದೆ. ಲಕ್ಷ ದೀಪೋತ್ಸವ ಎಲ್ಲರ ಬಾಳಲು ಬೆಳಕು ಮೂಡಿಸಲಿದೆ.

| ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಉಜ್ಜಯನಿ

ಜಗದ್ಗುರುಗಳು ನನ್ನ ಕ್ಷೇತ್ರದ ಮುತ್ತಂಗಿಯ ರಾಚೋಟೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಸುದೈವ. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಾವೆಲ್ಲರೂ ಧರ್ಮದ ಮಾರ್ಗದಲ್ಲಿ ಸಾಗೋಣ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಂಡು ಸಂತೋಷವಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಸದಾ ಸಹಾಯ ಸಹಕಾರ ನೀಡಲಾಗುವುದು.

|ಡಾ. ಶೈಲೇಂದ್ರ ಬೆಲ್ದಾಳೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net