ದೋಷಪೂರಿತ 240 ಸೈಲೆನ್ಸರ್ ಧ್ವಂಸ

29 Dwd 3
Published on

ಧಾರವಾಡ: ಬೈಕ್‌ಗಳಿಗೆ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಸವಾರರಿಗೆ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೆಲ ದಿನಗಳಿಂದ ವಶಪಡಿಸಿಕೊಂಡಿದ್ದ 240 ದೋಷಪೂರಿತ ಸೈಲೆನ್ಸರ್‌ಗಳನ್ನು ನಗರದ ಜ್ಯುಬಿಲಿ ವೃತ್ತದಲ್ಲಿ ಬುಧವಾರ ರೋಡ್‌ರೋಲರ್ ಬಳಸಿ ಧ್ವಂಸ ಮಾಡಿದ್ದಾರೆ.
ಕಂಪನಿಯಿAದ ಬೈಕ್‌ಗಳಿಗೆ ಅಳವಡಿಸಿದ್ದ ಸೈಲೆನ್ಸರ್‌ಗಳನ್ನು ತೆಗೆದು ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ವುಳ್ಳ ಬೈಕ್‌ಗಳನ್ನು ಜಪ್ತಿ ಮಾಡಲಾಗಿತ್ತು. ಇದು ಕಾನೂನುಬಾಹಿರವಾಗಿದ್ದರಿಂದ ದಂಡ ಸಹ ವಿಽಸಿ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ರೀತಿ ಸೈಲೆನ್ಸರ್ ಅಳವಡಿಸಬಾರದು ಎಂಬ ಅರಿವು ಮೂಡಿಸುವ ಉದ್ದೇಶದಿಂದ ನಗರದ ಪ್ರಮುಖ ವೃತ್ತವಾದ ಜ್ಯುಬಿಲಿ ಸರ್ಕಲ್‌ನಲ್ಲಿ ಸೈಲೆನ್ಸರ್‌ಗಳನ್ನು ಧ್ವಂಸ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಡಿಸಿಪಿಗಳಾದ ಕುಶಲ್ ಚೌಕ್ಸೆ ಮತ್ತು ರವೀಶ ಸಿ.ಆರ್., ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದ ದೋಷಪೂರಿತ 240 ಸೈಲೆನ್ಸರ್‌ಗಳನ್ನು ಧ್ವಂಸ ಮಾಡಲಾಯಿತು. ಈ ರೀತಿಯ ಸೈಲೆನ್ಸರ್‌ಗಳನ್ನು ಅಳವಡಿಸಬಾರದು ಎಂದು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net