24 ಗಂಟೆಯೂ ಎಚ್ಚರದಿಂದ ಕೆಲಸ ಮಾಡಿ

PH 09
Published on

ಅಫಜಲಪುರ: ಅಗ್ನಿಶಾಮಕ ಸಿಬ್ಬಂದಿ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲAತೂ ತಕ್ಷಣ ಸಮಸ್ಯೆಯಿರುವ ಸ್ಥಳಕ್ಕೆ ದೌಡಾಯಿಸಿ ಜನರನ್ನು ರಕ್ಷಿಸಬೇಕು ಎಂದು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಕಮಲ್ ಪಂತ್ ಸೂಚನೆ ನೀಡಿದರು.

ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಜನರ ದೂರುಗಳಿಗೆ ತಕ್ಷಣ ಸ್ಪಂದಿಸಿ ಜನಸ್ನೇಹಿಯಾಗಿ ಕೆಲಸ ಮಾಡಿ. ಸರ್ಕಾರವೂ ಆರೋಗ್ಯ ವಿಮೆ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಿ. ಎರಡು ಅಗ್ನಿಶಾಮಕ ವಾಹನಗಳಿದ್ದು, ಹಳೆಯದಾದ ಒಂದು ವಾಹನದ ಬದಲಿಗೆ ಹೊಸದಾಗಿ ನೀಡುವುದಾಗಿ ಹೇಳಿದರು.

ಸಿಬ್ಬಂದಿ ಕುಂದು-ಕೊರತೆಯೂ ಆಲಿಸಿದ ಅವರು, ಸರ್ಕಾರದ ಸೌಕರ್ಯ ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದರು. ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ ಅವರು ಕೈಗೊಂಡ ಕಾರ್ಯಗಳನ್ನು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ, ಸಿಪಿಐ ಪಂಡಿತ ಸಗರ, ಪಿಎಸ್‌ಐ ಮಡಿವಾಳಪ್ಪ ಬಾಗೋಡಿ, ಮಹಾಂತೇಶ ಜಮಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net