24 ಗಂಟೆಯಲ್ಲಿ ಕೊಲೆ ಆರೋಪಿಗಳ ಬಂಧನ

25-44
ರಾಯಬಾಗದ ಹೊರವಲಯದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯಿಂದ ಪೊಲೀಸರು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುವುದು. ಎಚ್.ಡಿ.ಮುಲ್ಲಾ, ಕಾಡಪ್ಪ ಜಕ್ಕನ್ನವರ, ಎ.ಜೆ.ಸಾರಾಪುರೆ ಇತರರಿದ್ದರು.
Published on

ರಾಯಬಾಗ, ಬೆಳಗಾವಿ: ವೃದ್ಧನ ಕೊಲೆಗೈದ ಆರೋಪಿಗಳನ್ನು ರಾಯಬಾಗ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಬಂಧಿಸಿ, ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕರೋಶಿಯ ಪ್ರಭಾಕರ ಸದಾಶಿವ ಮಗದುಮ್, ಬೆಲ್ಲದ ಬಾಗೇವಾಡಿಯ ಲಕ್ಷ್ಮಣ ನಿಂಗಪ್ಪ ಅಳಗುಂಡಿ, ಕೆಂಚನಟ್ಟಿಯ ಶಂಕರ ಬಾಳಪ್ಪ ಪಾಶ್ಚಾಪುರೆ ಬಂಧಿತ ಆರೋಪಿಗಳು. ಇವರು ಪಟ್ಟಣದ ಶಿವಾಜಿ ಪಾರ್ಕ್ ಹತ್ತಿರದ ರಸ್ತೆಯಲ್ಲಿ ಮಹಾದೇವ ಮಲ್ಲಪ್ಪ ಹುರಳಿ (60) ಎಂಬಾತನನ್ನು ಅ.21 ರಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು. ಡಿವೈಎಸ್‌ಪಿ ಶ್ರೀಪಾದ ಜಲ್ದೆ ಮಾರ್ಗದರ್ಶನದಲ್ಲಿ ಸಿಪಿಐ ಎಚ್.ಡಿ.ಮುಲ್ಲಾ, ಪ್ರೋಬೆಷನರಿ ಪಿಎಸ್‌ಐ ಕಾಡಪ್ಪ ಜಕ್ಕನ್ನವರ, ಎಎಸ್‌ಐ ಎ.ಜೆ.ಸಾರಾಪುರೆ, ಎಸ್.ಕೆ.ಕಾಗೆ, ಎಸ್.ವೈ.ತಳವಾರ, ಆರ್.ಬಿ.ಖಾನಾಪುರೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net