24 ಗಂಟೆಯಲ್ಲಿ ಕಳ್ಳರ ಬಂಧನ

07-8JVG01.
ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಜೇವರ್ಗಿ ಠಾಣೆಯಲ್ಲಿ ಪ್ರದರ್ಶಿಸಲಾಯಿತು. ಸಿಪಿಐ ಶಿವಪ್ರಸಾದ ಮಠದ, ಪಿಎಸ್ಐಗಳಾದ ಸಂಗಮೇಶ ಅಂಗಡಿ, ಸಿದ್ರಾಮಪ್ಪ, ಸಿಬ್ಬಂದಿ ಆನಂದ ಕೂಟನೂರ, ಶ್ರೀಮಂತ ನೇರಡಗಿ, ಯಲ್ಲಾಲಿಂಗ ಬಮ್ಮನಾಳ, ಸಿದ್ಧಲಿಂಗರೆಡ್ಡಿ, ಕಾಸಿಂಬೀ ಶೇಖ್, ಆಸೀಫ್ ಮುಲ್ಲಾ ಇದ್ದರು.
Published on

ಜೇವರ್ಗಿ (ಕಲಬುರಗಿ): ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಕಳ್ಳರನ್ನು ಬಂಧಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಗುರುಲಿಂಗಪ್ಪ ಅವರ ಪತ್ನಿಯ ವ್ಯಾನಿಟಿ ಬ್ಯಾಗ್ ಕಳ್ಳರು ಕದ್ದಿದ್ದರು. ಅದರಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದವು. ತಕ್ಷಣ ಗುರುಲಿಂಗಪ್ಪ ಜೇವರ್ಗಿ ಠಾಣೆಯಲ್ಲಿ ದೂರು ದಾಖಲಿಸಿದರು.

ಸಿಪಿಐ ಶಿವಪ್ರಸಾದ ಮಠದ ನೇತೃತ್ವದಲ್ಲಿ ಪಿಎಸ್ಐಗಳಾದ ಸಂಗಮೇಶ ಅಂಗಡಿ, ಸಿದ್ರಾಮಪ್ಪ, ಸಿಬ್ಬಂದಿ ಆನಂದ ಕೂಟನೂರ, ಶ್ರೀಮಂತ ನೇರಡಗಿ, ಯಲ್ಲಾಲಿಂಗ ಬಮ್ಮನಾಳ, ಸಿದ್ದಲಿಂಗರೆಡ್ಡಿ, ಕಾಸಿಂಬೀ ಶೇಖ್, ಆಸೀಫ್ ಮುಲ್ಲಾ ಕಾರ್ಯಾಚರಣೆ ನಡೆಸಿ ಶನಿವಾರ ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಲಬುರಗಿಯ ಭರತ ನಗರ ತಾಂಡಾದ ಆರತಿ ಉಪಾಧ್ಯ (25), ಏಕತಾ ಉಪಾಧ್ಯ (23) ಬಂಧಿತರು. ಇವರಿಂದ 28 ಗ್ರಾಂ ಚಿನ್ನ ಮತ್ತು 40 ತೊಲ ಬೆಳ್ಳಿ ಸೇರಿ 1,50 ಲಕ್ಷದ ಆಭರಣ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net