24 ಕಿಮೀ ಹಿಮ್ಮುಖ ಟ್ರ್ಯಾಕ್ಟರ್ ನಡೆಸಿದ ಭೂಪ

21ydg01
Published on

ಯಾದಗಿರಿ: ನಾಗರ ಪಂಚಮಿ ಹಬ್ಬ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ಪ್ರಸಿದ್ಧಿ ಪಡೆದು ಕೊಂಡಿದೆ. ಮಹಿಳೆಯರು ಸಂಭ್ರಮದಿಂದ ನಾಗಪ್ಪನಿಗೆ ಹಾಲೆರೆದರೆ, ಪುರುಷರು ವಿವಿಧ ಸ್ಪರ್ಧೆಗಳಲ್ಲಿ ಹುರುಪಿನಿಂದ ಭಾಗವಹಿಸಿ, ಗೆಲುವು ಸಾಸುವ ಮೂಲಕ ಬಹುಮಾನ ತಮ್ಮದಾಗಿಸಿಕೊಳ್ಳುತ್ತಾರೆ.

ಸೋಮವಾರ ಹಬ್ಬದ ನಿಮಿತ್ತ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ನಡೆಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಸಿ ಚಾಲಕ ಬಸಲಿಂಗಪ್ಪ ಹುರಸಗುಂಡಗಿ, ಇದರಲ್ಲಿ ಪಾಲ್ಗೊಂಡು 1.45 ಗಂಟೆ ಅವಯಲ್ಲಿ ಬರೋಬ್ಬರಿ 24 ಕಿ.ಮೀಟರ್ ಟ್ರ್ಯಾಕ್ಟರ್ ನಡೆಸಿ, ಸ್ಪರ್ಧೆಯಲ್ಲಿ ಗೆದ್ದಿದ್ದು ಗ್ರಾಮಸ್ಥರಿಂದ 1.45 ಲಕ್ಷ ರೂ.ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್ ವರೆಗೆ ಬಸಲಿಂಗಪ್ಪ ಮತ್ತು ಪ್ರತಿಸ್ರ್ಪ ಪರಶುರಾಮ ಟೋಕಾಪುರ ಮಧ್ಯ ಪಂದ್ಯ ಏರ್ಪಟ್ಟಿತ್ತು. ಅಂತಿಮವಾಗಿ 2 ನಿಮಿಷ ಮೊದಲು ಬಸಲಿಂಗಪ್ಪ ಗುರಿ ತಲುಪುವ ಮುನ್ನ ಬಹುಮಾನ ಗೆದ್ದಿದ್ದಾನೆ. ಪರಂಪರಾಗತವಾಗಿ ಬರುವ ನಾಗರ ಪಂಚಮಿಯ ಸಂದರ್ಭದಲ್ಲಿ ಅನೇಕ ಸ್ಪಧರ್ೆಗಳು ನಡೆದುಕೊಂಡು ಬಂದಿವೆ. ಮಹಿಳೆಯರಿಗಾಗಿ ಜೋಕಾಲಿ, ಕೊಬ್ಬರಿ ಬಟ್ಟಲುಗಳ ತಿರುಣಗಿ ಆಟದಂಥ ಸ್ಪರ್ಧೆಗಳು ಸಾಮಾನ್ಯ.

ಯುವಕರು ಲಿಂಬೆಹಣ್ಣು ಎಸೆತ, ಕಣ್ಣು ಮುಚ್ಚಿ ನಡೆಯುವುದು, ಪಾದಯಾತ್ರೆ ತೆರಳುವುದು ಭಾರ ಎತ್ತುವುದು, ಗುಂಡು ಎಸೆತ, ಚಕ್ಕಡಿ ಗಾಲಿ ಎತ್ತುವುದು, ಓಡಿಸುವುದು ಸೇರಿ ಪ್ರಮುಖ ಸ್ಪರ್ಧೆಗಳು ಆಯೋಜಿಸಲಾಗುತ್ತದೆ. ಗ್ರಾಮದಲ್ಲಿ ಯುವಕರ ಪ್ರತಿಭೆಯನ್ನು ಮೆರೆಯಲು ವೇದಿಕೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಟೋಕರಿ ಕೋಲಿ ಸಮಾಜದ ಉಮೇಶ ಮುದ್ನಾಳ್ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಗೆಲುವು ಸಾಸಿದ ಮತ್ತು ಪರಾಭವಗೊಂಡ ಯುವಕರಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net