24 ಅಧಿಕಾರಿಗಳಿಗೆ ‘ಸಾಧನೆ’ ಪ್ರಶಸ್ತಿ

15manju10a-Web
ಬೆಳಗಾವಿ ನಗರದ ಜಿಪಂ ಆವರಣದಲ್ಲಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ ಅವರು ಸಾಧಕ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಜಿಪಂ ಸಿಇಒ ಎಚ್.ವಿ. ದರ್ಶನ, ಜಿಪಂ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ಮುಖ್ಯಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ ಇದ್ದರು.
Published on

ಬೆಳಗಾವಿ: ನರೇಗಾ ಹಾಗೂ ವಿವಿಧ ಯೋಜನೆಯಡಿ 2020-21ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾಮಗಾರಿ ಅನುಷ್ಠಾನ ಮಾಡಿದ 24 ಅಧಿಕಾರಿಗಳಿಗೆ 74ನೇ ಸ್ವಾತಂತ್ರೊೃೀತ್ಸವದ ಸಂದರ್ಭದಲ್ಲಿ ನಗರದ ಜಿಪಂ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಶನಿವಾರ ಗೌರವಿಸಲಾಯಿತು. ಖಾನಾಪುರ ತಾಪಂ ಇಒ ಬಸವರಾಜ ಅಡವಿನಮಠ, ಸವದತ್ತಿ ತಾಪಂ ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ, ಸವದತ್ತಿ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತ ಎಚ್.ಕೆ. ಪಾಟೀಲ, ಸಂಪಗಾಂವ ಗ್ರಾಪಂ ಪಿಡಿಒ ಜ್ಯೋತಿ ಉಪ್ಪಿನ, ಹೂಲಿ ಗ್ರಾಪಂ ಪಿಡಿಒ ಫಕೀರವ್ವ ಹಣಸಿ ಸೇರಿದಂತೆ ವಿವಿಧ ಇಲಾಖೆಯ 24 ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಉಪಾಧ್ಯಕ್ಷ ಅರುಣ ಕಟಾಂಬಳೆ ಪ್ರಶಸ್ತಿ ನೀಡಿ ಗೌರವಿಸಿದರು. ಜಿಪಂ ಸಿಇಒ ಎಚ್.ವಿ. ದರ್ಶನ, ಜಿಪಂ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ಮುಖ್ಯಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net