24 ಕ್ವಿಂಟಾಲ್ ಪಡಿತರ ಅಕ್ಕಿ ವಶ

Reshan Rice
Published on

ಹುಬ್ಬಳ್ಳಿ: ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಚಾಲಕರಿಬ್ಬರನ್ನು ಹಳೇ ಹುಬ್ಬಳ್ಳಿ ಮುಸ್ತಾನಸೋಫಾದ ಬಳಿ ಶನಿವಾರ ಸಿಸಿಬಿ ಪೊಲೀಸರು ಬಂಧಿಸಿದ್ದು, 81,600 ರೂ. ಮೌಲ್ಯದ 24 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ಖಾದರ್ ಬಿಜಾಪುರ, ನವಾಜಖಾನ್ ತರೀನ್ ಬಂಧಿತ ಆರೋಪಿಗಳು. ಪಡಿತರ ಅಕ್ಕಿ ಫಲಾನುಭವಿಗಳ ಹತ್ತಿರ ಕಡಿಮೆ ದರಕ್ಕೆ ಪಡೆದು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಸಂಗ್ರಹಿಸಿದ್ದರು ಎನ್ನಲಾಗಿದೆ. ಸಿಸಿಬಿ ಎಎಸ್​ಐ ಬಿ.ಎನ್. ಲಂಗೋಟಿ ಅವರ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಆಗ ಲಾರಿಯಲ್ಲಿ 80 ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಳಿಕ ಆಹಾರ ಇಲಾಖೆ ನಿರೀಕ್ಷಕ ಅಬ್ದುಲ್ ಖತೀಬ ಅವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬುದು ಖಾತ್ರಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net